ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಕೇಸ್ ನಲ್ಲಿ ಬಂಧಿತನಾಗಿರೋ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತೆ SIT ತೆಕ್ಕೆಗೆ ಬಿದ್ದಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಸ್ಫೋಟಕ ಮಾಃಇತಿ ಬಯಲಾಗಿದೆ. ಯೆಸ್.. ಕಳೆದ ಮೇ.31 ರಂದು ವಿದೇಶದಿಂದ ವಾಪಸ್ ಆಗಿದ್ದ ಪ್ರಜ್ವಲ್ ರನ್ನ ಏರ್ ಪೋರ್ಟ್ ನಲ್ಲೇ ಎಸ್ ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ರು.
ಹೌದು ಆರೋಪಿ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯ ಜೊತೆ ಇರುವ ವೀಡಿಯೋ ವೈರಲ್ ಆಗುತ್ತಿದ್ದಂತೆ ಜರ್ಮನಿಗೆ ಹೋಗಿ ಅಡಿಗಿಕೊಂಡಿದ್ದ. ಸುಮಾರು 34 ದಿನಗಳ ಕಾಲ ಯಾರ ಸಂಪರ್ಕಕ್ಕೂ ಸಿಗದೇ ಜರ್ಮನಿಯಲ್ಲಿದ್ರು. ಈ ವೇಳೆ ಆರೋಪಿ ಪ್ರಜ್ವಲ್ಗೆ ಗರ್ಲ್ಫ್ರೆಂಡ್ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ.
Famous Places: ಉಡುಪಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು ಯಾವುವು ಗೊತ್ತಾ..? ಈ ಸ್ಟೋರಿ ನೋಡಿ
ಪ್ರಜ್ವಲ್ ರೇವಣ್ಣಗೆ ವಿದೇಶದಲ್ಲಿದ್ದಾಗ ಗರ್ಲ್ಫ್ರೆಂಡ್ ಸಹಾಯ ಮಾಡಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ವಿಶೇಷ ತನಿಖಾ ದಳ (SIT) ತನಿಖೆಯ ವೇಳೆ ಬಹಿರಂಗವಾಗಿದೆ. ಹಾಗಾಗಿ ಎಸ್ಐಟಿ ಅಧಿಕಾರಿಗಳು ಆರೋಪಿ ಪ್ರಜ್ವಲ್ ಸ್ನೇಹಿತೆಗೆ ನೋಟಿಸ್ ಕೊಟ್ಟಿದ್ದಾರೆ. ಪ್ರಜ್ವಲ್ಗೆ ವಿದೇಶದಲ್ಲಿರುವಾಗ ಸಹಾಯ ಮಾಡಿರೋ ಬಗ್ಗೆ ದಾಖಲೆಗಳಿದ್ದು, ಪ್ರಕರಣ ಸಂಬಂಧ ಮಾಹಿತಿ ನೀಡುವಂತೆ ಕೋರಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ಗರ್ಲ್ಫ್ರೆಂಡ್ಗೆ ನೋಟಿಸ್ ಕೊಟ್ಟಿದೆ.
ಸತ್ಯ ವಿದೇಶದಲ್ಲಿ ಹಣ ವರ್ಗಾವಣೆ ಹೇಗೆ ನಡಿತು. ತನ್ನ ಮೊದಲ ಮೊಬೈಲ್ ಅನ್ನು ವಿದೇಶದಲ್ಲಿ ಹಾಳು ಮಾಡಿದ್ದಾನ. ಪ್ರಜ್ವಲ್ ಬಳಿ ಮೊಬೈಲ್ ಇಲ್ಲ ಅಂದ್ರೆ ಯಾವ ಮೊಬೈಲಿಂದ ವಿಡಿಯೋ ರೆಕಾರ್ಡ್ ಆಯ್ತು. ಜೊತೆಗೆ ಪ್ರಜ್ವಲ್ ವಾಟ್ಸಾಪ್ ಹಿಸ್ಟರಿ ಅನ್ನು ಎಸ್ಐಟಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ ನಾಲ್ಕು ದಿನಗಳ ಕಾಲ ಪ್ರಜ್ವಲ್SIT ಯಲ್ಲಿ ಯಾವ ಉತ್ತರ ನೀಡುತ್ತಾನೆ ಅನ್ನೋದನ್ನ ಕಾದು ನೋಡ್ಬೇಕು.