ಆತ ಲಾರಿ ಮಾಲೀಕ..19 ವರ್ಷದ ಹಿಂದೆ ಸುಂದರಿ ಒಬ್ಬಳನ್ನ ವಿವಾಹವಾಗಿದ್ದ..ಸಂಸಾರ ಚನ್ನಾಗಿಯೇ ಸಾಗ್ತಿತ್ತು..ದಂಪತಿಗೆ ಇಬ್ಬರು ಮಕ್ಕಳಿದ್ದಾರೆ..ಆದ್ರೆ ದಿನ ಕಳಿತಿದ್ದಂತೆ ಪತಿಗೆ ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹುಟ್ಟಿಕೊಂಡಿತ್ತು..ಇದೇ ವಿಚಾರವಾಗಿ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ..ಇದೇ ಕೇಸ್ ಈಗ ಟ್ವಿಸ್ಟ್ ಮಡೆದುಕೊಂಡಿದ್ದು..ಹೆಂಡತಿ ಗಂಡನ ಕುಟುಂಬಸ್ಥರ ಮೇಲೆಯೇ ಗಂಭೀರ ಆರೋಪ ಮಾಡಿದ್ದಾಳೆ.
ಹೌದು..ಈ ಫೋಟೊದಲ್ಲಿ ಕಾಣ್ತಿರೊ ದಂಪತಿಗಳ ಹೆಸರು..ಪವಿತ್ರಾ ಮತ್ತು ಸೋಮಶೇಖರ್..ಲಾರಿ ಮಾಲೀಕನಾಗಿದ್ದ ಸೋಮಶೇಖರ್ ಪತ್ನಿ ಜೊತೆಗೆ ಮಹಾಲಕ್ಷ್ಮಿ ಲೇಔಟ್ 2 ನೇ ಕ್ರಾಸ್ ನಲ್ಲಿ ವಾಸವಿದ್ರು..ಆದ್ರೆ ಪತ್ನಿಗೆ ಪರ ಪುರುಷನ ಜೊತೆಗೆ ಅನೈತಿಕ ಸಂಬಂಧ ಇದೆ ಅನ್ನೋ ಅನುಮಾನ ಪತಿಗೆ ಹುಟ್ಟಿಕೊಂಡಿತ್ತು..ಇದರಿಂದ ನೊಂದಿದ್ದ ಸೋಮಶೇಖರ್ 2024 ರ ಡಿಸಂಬರ್ 22 ರಂದು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ..ಅದೇ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ..ಗಂಡನ ಸಾವಿಗೆ ನನ್ನ ಅನೈತಿಕ ಸಂಬಂಧ ಕಾರಣವಲ್ಲ..ಅವರ ಸಂಬಂಧಿಕರೇ ಈ ರೀತಿ ಭಾವನೆ ಬರುವಂತೆ ಮಾಡಿದ್ದಾರೆಂದು ಪತ್ನಿ ಪವಿತ್ರಾ ಆರೋಪಿಸ್ತಿದ್ದಾಳೆ..
Tulsi Plant: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳಿತಾಗುತ್ತೆ? ಇಲ್ಲಿದೆ ಮಾಹಿತಿ
ಹೌದು..ಪತಿ ಸೋಮಶೇಖರ್ ಸಾವಿನ ಬಳಿಕ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಗಂಡನ ಸಂಬಂಧಿಕರು ಪತ್ನಿ ಹೆಸರಲ್ಲಿದ್ದ ಮನೆಯ ದಾನಪತ್ರವನ್ನ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರಂತೆ..ಜೊತೆಗೆ ಮನೆಗೆ ಬಂದು ಆಸ್ತಿ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು…ಅಲ್ಲದೇ ತನ್ನ ಜೊತೆಗೆ ನಾದಿನಿ ಪತಿ ನಾಗರಾಜ್ ಅಸಭ್ಯವಾಗಿ ವರ್ತಿಸಿದ್ದಾರೆ..ಅದಕ್ಕೆ ಸೊಪ್ಪು ಹಾಕದಿದ್ದಕ್ಕೆ ಹೀಗೆಲ್ಲ ಮಾಡ್ತಿದ್ದಾರೆಂದು ಪತ್ನಿ ಪವಿತ್ರಾ ಆರೋಪಿಸ್ತಿದ್ದಾರೆ..
ಸದ್ಯ ಇದೇ ಆರೋಪದ ಅಡಿಯಲ್ಲಿ ಪವಿತ್ರಾ ಮೈದುನ ತ್ರಿಮೂರ್ತಿ ,ನಾದಿನಿ ಪತಿ ನಾಗರಾಜ್ ಪತಿ ಸ್ನೇಹಿತ ಸಿದ್ದರಂಗಸ್ವಾಮಿ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು..ಪತಿ ಪತ್ನಿ ನಡುವೆ ಅನುಮಾನ ಬರುಂತೆ ಇವರೇ ಮಾಡಿದ್ದಾರೆ..ಅಲ್ಲದೇ ಗಂಡನಿಗೆ ಕುಡಿತ ಜಾಸ್ತಿ ಮಾಡಿಸಿ ಮನೆಯಲ್ಲಿ ನೆಮ್ಮದಿ ಇಲ್ಲದಂತೆ ಮಾಡಿದ್ರು..ಅಷ್ಟೇ ಅಲ್ಲ ನನಗೆ ಅನೈತಿಕ ಸಂಬಂಧ ಇದೆ ಎಂದು ಪತಿಗೆ ಬಿಂಬಿಸಿ ಪತಿ ಸಾವಿಗೆ ಕಾರಣರಾಗಿದ್ದಾರೆ..
ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ..ಅಲ್ಲದೇ ನನ್ನ ದಾಖಲೆ ,ಆಸ್ತಿ ಪತ್ರ ತೆಗೆದುಕೊಂಡು ಹೋಗಿದ್ದು ಸದ್ಯ ನನ್ನ ಯಾವುದೇ ದಾಖಲೆ ಇಲ್ಲದೆ ಈಗ ಪರದಾಡುವಂತಾಗಿದೆ ಎಂದಿದ್ದಾರೆ.. ಸದ್ಯ ಸೋಮಶೇಖರ್ ಆತ್ಮಹತ್ಯೆ ಪ್ರಕರಣ ಹಾಗೂ ಸಂಬಂಧಿಕರ ವಿರುದ್ಧ ಪವಿತ್ರಾ ನೀಡಿರುವ ಎರಡೂ ಪ್ರಕರಣ ದಾಖಲಿಸಿಕೊಂಡಿರೊ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ..ತನಿಖೆ ಬಳಿಕ ಯಾರದ್ದು ಸತ್ಯ ಯಾರದ್ದು ಸುಳ್ಳು ಅನ್ನೋದು ಗೊತ್ತಾಗಲಿದೆ…