ಧಾರವಾಡ: ಆಕೆ ಅದೆಷ್ಟೋ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾದ ಶಿಕ್ಷಕಿ..ನಿವೃತ್ತಿ ನಂತರ ಆಕೆ ತನ್ನ ಪಾಡಿಗೆ ಬದುಕಿದರೆ ಇಷ್ಟೊತ್ತಿಗೆ ಸುಂದರ ಜೀವನ ಅವಳದಾಗುತ್ತಿತ್ತು..ದುಡ್ಡಿನ ಆಸೆಗೆ ಬಿದ್ದ ಆಕೆ ದುಡ್ಡು ಪಡೆದವನಿಂದಲೆ ಬೀಕರವಾಗಿ ಹತ್ಯೆಯಾಗಿದ್ದಾಳೆ..ಅಷ್ಟಕ್ಕೂ ಯಾರು ಆಕೆ..ಆಕೆಯ ಹತ್ಯೆಗೆ ಕಾರಣ ಏನು ಗೊತ್ತಾ..ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್.
ಹೀಗೆ ಖಾಲಿ ಖಾಲಿ ಮನೆ.. ಮನೆ ಎದುರು ನೆಮ್ಮದಿ ಎನ್ನುವ ಬೋರ್ಡ್..ಆದ್ರೆ ಆ ನೆಮ್ಮದಿಯೇ ಇಂದು ದುಡ್ಡಿನ ಆಸೆಗೆ ಜೀವನ ಅಂತ್ಯಗೊಳಿಸಿದೆ..ಧಾರವಾಡದ ನಗರದ ಓಂ ನಗರದಲ್ಲಿರುವ ಈ ನೆಮ್ಮದಿ ಎನ್ನುವ ಮನೆಯಲ್ಲಿ ನಿವೃತ್ತ ಶಿಕ್ಷಕಿ ಗಿರಿಜಾ ನಡೂರಮಠ ಏಕಾಂಗಿ ಜೀವನ ನಡೆಸುತ್ತಿದ್ದರು..ಗಂಡ ಮಕ್ಕಳು ಇಲ್ಲದೆ ಏಕಾಂಗಿಯಾಗಿದ್ದ ಗಿರಿಜಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು..ಇತ್ತೀಚೆಗೆ ನಿವೃತ್ತಿ ಯಾಗಿ ಜೀವನ ನಡೆಸುತ್ತಿದ್ದರು..ಆದ್ರೆ ಇದೆ 15ರಂದು ಗಿರಿಜಾ ಸಾವನ್ನಪ್ಪಿದರು.
ಆ ಸಾವು ಮೊದಮೊದಲು ಸಹಜ ಅಂತಲೇ ಭಾವಿಸಲಾಗಿತ್ತು..8ದಿನಗಳ ಬಳಿಕ ಸಿಕ್ಕ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿ ಸಿಕ್ಕಿತ್ತು..ಆದ್ರೆ ಯಾವಾಗ ಬಡ್ಡಿ ವ್ಯವಹಾರ ಗೊತ್ತಾಗುತ್ತೋ ಆಗ ಇದು ಮರ್ಡರ್ ಅನ್ನೋದು ತನಿಖೆಯ ವೇಳೆ ಗೊತ್ತಾಗಿದೆ..ಅಮರಗೋಳ ಮಂಜುನಾಥ್ ದಂಡಿನ ಎನ್ನುವ ವ್ಯಕ್ತಿಗೆ 10ಲಕ್ಷ ನೀಡಿದ್ದ ಗಿರಿಜಾ ನಿತ್ಯ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ..ಆದ್ರೆ ಅದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬಂದು ನೀರು ಕೇಳುವ ನೆಪದಲ್ಲಿ ಗಿರಿಜಾ ಹಾಕಿದ್ದ ವೇಲ್ ನಿಂದಲೆ ಕುತ್ತಿಗೆ ಹಿಸುಕಿ ಹತ್ಯೆ ಮಾಡಿದ್ದಾನೆ..
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಹಲವು ವರ್ಷಗಳಿಂದ ಗಿರಿಜಾ ತಮ್ಮ ಸುತ್ತಮುತ್ತಲೂ ಹಾಗೂ ಇತರರ ಜೊತೆಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಲೇ ಬಂದಿದ್ದಾರೆ..ನಿವೃತ್ತಿ ಬಳಿಕ ಬಡ್ಡಿ ವ್ಯವಹಾರದ ಮೂಲಕ ಹಣ ಗಳಿಸುವ ಗೋಜಿಗೆ ಬಿದ್ದ ಗಿರಿಜಾ ತಮ್ಮ ಹಣವನ್ನು ಬಡ್ಡಿ ಮೂಲಕ ಪಡೆಯುವ ಇರದೆಯಿಂದಲೆ ಮಂಜುನಾಥ್ ಗೆ ಪದೇ ಪದೇ ಕರೆ ಮಾಡಿ ಹಣ ಕೇಳಿದ್ದಾರೆ..ಆದ್ರೆ ಹಣ ಕೊಡಬೇಕಿದ್ದ ಮಂಜುನಾಥ್ ಹತ್ಯೆ ಮಾಡಿ ಯಾವುದೇ ಒಂದು ಒಂದು ಕ್ಲೂ ಬಿಡದೆ ಎಸ್ಕೇಪ್ ಆಗಿದ್ದ..ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಧಾರವಾಡದ ವಿದ್ಯಾಗಿರಿಯ ಪೊಲೀಸರು ಪೋಸ್ಟ್ ಮಾರ್ಟಂ ಗೆ ದೇಹವನ್ನ ಕಳಿಸುತ್ತಾರೆ..
ಆಗ ಇದು ಸಹಜ ಸಾವು ಅಲ್ಲ ಇದೊಂದು ಪ್ರೀ ಪ್ಲಾನ್ ಮರ್ಡರ್ ಅನ್ನೋದು ಗೊತ್ತಾಗುತ್ತೆ..ಸಾವನ್ನಪ್ಪಿ 8 ದಿನಗಳ ಬಳಿಕ ಮೃತದೇಹದ ಸ್ಥಿತಿ ಕೊಳೆತ ರೀತಿಯಲ್ಲಿ ಸಿಕ್ಕಿದ್ದು, ಅಕ್ಕಪಕ್ಕದವರಿಗೆ ವಾಸನೆ ಬಂದಿದೆ..ಅಲ್ಲಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..ಆಗಲೇ ಇಲ್ಲೊಂದು ದೇಹ ಇದೆ ಅಂತ ಗೊತ್ತಾಗಿದೆ.. ಒಟ್ಟಾರೆ ಹಿಂದೆ ಮುಂದೆ ಯಾರೂ ಇಲ್ಲದೆ ಏಕಾಂಗಿ ಜೀವನ ನಡೆಸುತ್ತಿದ್ದ ಗಿರಿಜಾ ನಿವೃತ್ತಿ ಬಳಿಕ ಅದೇ ಹಣದಲ್ಲಿ ಚೆಂದದ ಬದುಕು ಸಾಗಿಸಬಹುದಿತ್ತು..ಆದ್ರೆ ಹಣದ ಹಿಂದೆ ಬಿದ್ದಿದ್ದ ಶಿಕ್ಷಕಿ ಈ ರೀತಿಯಾಗಿ ಹಣ ಪಡೆದವನಿಂದಲೆ ಹತ್ಯೆ ಆಗಿದ್ದು ನಿಜಕ್ಕೂ ಕೊಟ್ಟೋನು ಕೋಡಂಗಿ ಇಸಗೊಂಡವನು ಈರಭದ್ರ ಎನ್ನುವ ಹಾಗಾಗಿದೆ ಗಿರಿಜಾ ಕಥೆ…