ಬೆಳಗಾವಿ :- ನಾವಗೆ ಗ್ರಾಮದಲ್ಲಿ ನಾಲ್ಕು ಮನೆಗಳ ಮೇಲೆ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಏಕಾಏಕಿ ಮನೆಗಳ ಮೇಲಿನ ದಾಳಿಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಗ್ರಾಮದ ಹಿರಿಯರ ಮನೆಗಳನ್ನು ಟಾರ್ಗೆಟ್ ಮಾಡಿ ಕಿಡಿಗೇಡಿಗಳಿಂದ ಕೃತ್ಯ ಎಸಗಲಾಗಿದೆ. ಹಿರಿಯರ ಮನೆ ಟಾರ್ಗೆಟ್ ಆಗಲು ಕಾರಣವಾಯಿತಾ ತ್ರಿಕೋನ ಪ್ರೇಮ ಪ್ರಕರಣ ಎಂಬ ಶಂಕೆ ಮೂಡಿದೆ.
ಬೆಳಗಾವಿ ತಾಲೂಕಿನ ಖರ್ಲೆ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದ ನಾವಗೆ, ಬಾದರವಾಡಿ ಗ್ರಾಮದ ಹುಡುಗರು, ಸ್ಟೇಟಸ್ ಇಡುವ ವಿಚಾರಕ್ಕೆ ನಾವಗೆ ಹಾಗೂ ಬಾದರವಾಡಿ ಗ್ರಾಮದ ಹುಡುಗರ ಮಧ್ಯೆ ಗಲಾಟೆ ನಡೆದಿದೆ. ಎರಡು ದಿನಗಳ ಹಿಂದೆ ಯುವಕರನ್ನು ಕೂರಿಸಿಕೊಂಡು ನಾವಗೆ ಗ್ರಾಮದ ಹಿರಿಯರು ಬುದ್ಧಿವಾದ ಹೇಳಿದ್ದರು.
ಅಲ್ಲದೇ ಗ್ರಾಮದ ಪಂಚರು ಬೆಳಗಾವಿ ಗ್ರಾಮೀಣ ಠಾಣೆಗೂ ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ಬಾದರವಾಡಿಯ 30 ಕ್ಕೂ ಅಧಿಕ ಯುವಕರಿಂದ ಅಟ್ಟಹಾಸ ಮೆರೆದಿದ್ದಾರೆ. ಗ್ರಾಮದ ಹಿರಿಯಯ ಮನೆಗಳನ್ನು ದ್ವಂಸ ಮಾಡಲು ಯತ್ನಿಸಲಾಗಿದೆ.
ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ್ದ ವಾಹನ, ಬೈಕ್, ಮನೆಗಾಜು ಪುಡಿಪುಡಿ ಮಾಡಿದ್ದಾರೆ.