ಧಾರವಾಡ: ಪಾರ್ಕಿಂಗ್ ಮಾಡಿದ ಕಾರಿನ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿರುವ ಘಟನೆ ಧಾರವಾಡದ ಆಜಾದ್ ಪಾರ್ಕ್ ಬಳಿ ಸಂಭವಿಸಿದೆ. ಆಜಾದ್ ಪಾರ್ಕ್ ಮುಂಭಾಗದಲ್ಲಿ ಈ ಬೃಹತ್ ಮರವಿತ್ತು. ಮರದ ಬುಡ ಸಂಪೂರ್ಣ ಕೊಳೆತದ್ದರಿಂದ ಏಕಾಏಕಿ ಆ ಮರ ನೆಲಕಚ್ಚಿದೆ. ಮರದ ಕೆಳಗಡೆ ಪಾರ್ಕ್ ಮಾಡಲಾಗಿದ್ದ ಕಾರಿನ ಮೇಲೆಯೇ ಈ ಮರ ಉರುಳಿ ಬಿದ್ದಿದೆ.
Namma Metro: ಇನ್ಮುಂದೆ ಮೆಟ್ರೋದಲ್ಲೂ ನಡೆಯಲಿದೆ ಶೂಟಿಂಗ್ – ಬಿಎಂಆರ್ಸಿಎಲ್ ಗ್ರೀನ್ ಸಿಗ್ನಲ್
ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ್ದರಿಂದ ಅನಾಹುತವೊಂದು ತಪ್ಪಿದಂತಾಗಿದೆ. ಈ ಮರ ಉರುಳಿ ಬಿದ್ದಿದ್ದರಿಂದ ಆ ರಸ್ತೆ ಕೆಲಕಾಲ ಬಂದ್ ಆಗಿತ್ತು. ಹೆಸ್ಕಾಂನವರು ಹಾಗೂ ಪಾಲಿಕೆಯವರು ಸ್ಥಳಕ್ಕೆ ಬಂದು ಮರ ತೆರವುಗೊಳಿಸುವ ಕೆಲಸ ಮಾಡಿದರು.