ಬೆಂಗಳೂರು – ಮನುಷ್ಯತ್ವವಿಲ್ಲದ ಬಿಬಿಎಂಪಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನೂರಾರು ಕನಸು ಕಟ್ಟಿಕೊಂಡ ಅಮಾಯಕ ವಿದ್ಯಾರ್ಥಿನಿ ಪ್ರಾಣ ತೆತ್ತಿದ್ದಾಳೆ. ಅವ್ರ ಕೆಲಸ ಕರೆಕ್ಟಾಗಿ ಮಾಡಿದ್ರೆ ಇವತ್ತು ವಿದ್ಯಾರ್ಥಿನಿ ಸಾವನ್ನಪ್ತಿರಲಿಲ್ಲ. ನಿನ್ನೆ ಸೆಂಟ್ರಿಂಗ್ ಬಿದ್ದು ಬಾಲಕಿ ಸಾವಿನ ಹಿಂದೆ ಕೂಡ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಣ್ಮುಂದಿದೆ.. ಪೊಲೀಸ್ರೂ ಇಲ್ಲಿ ಕಣ್ಮುಚ್ಚಿ ಕುಳ್ತಿರೊ ಸ್ಟೋರಿ ಇದೆ ನೋಡಿ..
ಟೀಮ್ ಇಂಡಿಯಾಗೆ ಹೀನಾಯ ಸೋಲು: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಲಗ್ಗೆಯಿಟ್ಟ ಆಸೀಸ್!
ನಿನ್ನೆ ವಿವಿ ಪುರಂ ಠಾಣಾ ವ್ಯಾಪ್ತಿಯ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಹಿಂದೆ ದುರಂತವೇ ನಡೆದಿತ್ತು. ಸ್ಕೂಲ್ ಮುಗಿಸ್ಕೊಂಡು ಮನೆಗೆ ಹೋಗ್ತಿದ್ದ ತೇಜಸ್ವಿನಿ ಎಂಬ ಬಾಲಕಿಯ ಮೇಲೆ ಐದು ಅಂತಸ್ಥಿನ ಮೇಲಿಂದ ಬಿದ್ದಿದ್ದ ಸೆಟ್ರಿಂಗ್ ನ ಸಾರ್ವೆ ಮರ ಬಾಲಕಿಯ ಜೀವವನ್ನೇ ತೆಗೆದಿದೆ. ಆದ್ರೆ ಈ ಘಟನೆಗೆ ಕಟ್ಟಡದ ಮಾಲೀಕ, ಕಾಂಟ್ಯಾಕ್ಟ್ಟರ್ ನೇರಹೊಣೆ ಅನ್ನೋದು ಒಂದ್ಕಡೆ ಆದ್ರೆ ಬಿಬಿಎಮ್ ಪಿ ಅಧಿಕಾರಿಗಳು ತಮ್ಮ ಕೆಲಸ ಮಾಡಿ ಅವ್ರನ್ನ ಎಚ್ಚರಿಸಿದ್ರೆ ಈ ಘಟನೆಯೇ ಆಗ್ತಿರ್ಲಿಲ್ಲ ಅನ್ಸುತ್ತೆ.. ನಿರ್ಲಕ್ಷ್ಯ ವಹಿಸಿರೋ ಮಾಲೀಕರು, ಗುತ್ತಿಗೇದಾರ, ಬಿ ಬಿ ಎಮ್ ಪಿ ಅಧಿಕಾರಿಗಳ ವಿರುದ್ದ ಬಾಲಕಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಕಟ್ಟಡ ಮಾಲೀಕ, ಕಾಂಟ್ರ್ಯಾಕ್ಟರ್, ಬಿಬಿಎಮ್ ಪಿ ಅಧಿಕಾರಿಗಳ ನಿರ್ಲಕ್ಷ್ಯ ಒಂದ್ಕಡೆ ಆದ್ರೆ ಇಂತಹ ಘಟನೆಯಿಂದ ಮಗಳನ್ನ ಕಳೆದುಕೊಂಡು ಸೂತಕದಲ್ಲಿರೋ ಕುಟುಂಬಸ್ಥರ ಜೊತೆಗಿನ ಪೊಲೀಸರ ವರ್ತನೆ ಮತ್ತೊಂದು ಕಥೆ.. ಇಂತಹ ಘಟನೆಗಳು ನಡೆದ ಕೂಡಲೇ ಪೊಲೀಸ್ರು ಸಂಬಂಧಪಟ್ಟೋರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಟ್ಟಡದ ಬಳಿ ಇರೋ ದಿವ್ಯ ನಿರ್ಲಕ್ಷ್ಯ ಕಣ್ಮುಂದೆಯೇ ತೋರುತ್ತೆ. ಬಾಲಕಿಯ ಸಾವಾಗಿದೆ. ಆದ್ರೂ ಪೊಲೀಸ್ರು ಕೇಸ್ ದಾಖಲಿಸಿಕೊಂಡಿದ್ದು ಬಿಟ್ರೆ ಸಂಬಂಧಪಟ್ಟ ಮಾಲೀಕರು, ಕಾಂಟ್ರ್ಯಾಕ್ಟರ್, ಬಿಬಿಎಮ್ ಪಿ ಅಧಿಕಾರಿಗಳ ವಿರುದ್ದ ಇನ್ನೂ ಕ್ರಮ ಕೈಗೊಂಡಿಲ್ಲ.. ಯಾರನ್ನೂ ಅರೆಸ್ಟ್ ಮಾಡಿಲ್ಲ.. ಈ ಬಗ್ಗೆ ಬಾಲಕಿ ಪೋಷಕರು ಪ್ರಶ್ನೆ ಮಾಡಿದ್ರೆ.. ಖಾಲಿ ಪೇಪರ್ ನಲ್ಲಿ ಸೈನ್ ಮಾಡಿಕೊಡಿ.. ಕಟ್ಟಡ ಮಾಲೀಕರ ಹತ್ರ ಮಾತಾಡಿ ಅಂತಾ ಸೆಟಲ್ಮೆಂಟ್ ಮಾಡೋ ರೀತಿಲಿ ಪೊಲೀಸ್ರು ಮಾತಾಡ್ತಿದ್ದಾರಂತೆ.. ಅಲ್ಲದೇ ಪೋಸ್ಟ್ ಮಾರ್ಟಮ್ ಪ್ರಕ್ರಿಯೆ ಕೂಡ ಬೇಗ ಮುಗಿಸಿಕೊಡ್ತಿಲ್ಲ.. ಇವ್ರೂ ಅವ್ರ ಜೊತೆ ಶಾಮೀಲಾಗಿದ್ದಾರೆ.. ಪೊಲೀಸರ ಮೇಲೆ ನಂಬಿಕಯೇ ಇಲ್ಲ.. ಅಂತಾ ಬಾಲಕಿಯ ಕುಟುಂಬಸ್ಥರು ವಿಕ್ಟೋರಿಯಾ ಆಸ್ಪತ್ರೆ ಬಳಿ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ಪೊಲೀಸ್ರ ವರ್ತನೆಗೆ ಬೇಸತ್ತಿದ್ದ ಬಾಲಕಿ ಕುಟುಂಬಸ್ಥರು ಬಾಲಕಿಯ ಶವ ಕೊಟ್ಮೇಲೆ ಮನೆಗೆ ತಗೊಂಡ್ ಹೋಗಲ್ಲ. ನ್ಯಾಯ ಸಿಗೋವರೆಗೂ ಠಾಣೆ ಮುಂದೆ ಇಟ್ಟು ಪ್ರತಿಭಟನೆ ಮಾಡ್ತೀವಿ ಅಂತಾ ಪಟ್ಟು ಹಿಡಿದಿದ್ರು.. ಹನ್ನೊಂದು ಗಂಟೆಯಾದ್ರೂ ಪೊಲೀಸ್ ಅಧಿಕಾರಿಗಳು ಯಾರೂ ಬಂದಿಲ್ಲ. ಕಾಲ್ ಮಾಡಿದ್ರ ರೆಸ್ಪಾನ್ಸ್ ಮಾಡಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.. ಹನ್ನೆರಡುಗಂಟೆ ಆಗ್ತಿದ್ದಂತೆಯೇ ವಿಕ್ಟೋರಿಯಾ ಶವಾಗಾರದ ಬಳಿ ಬಂದಿದ್ದ ಎಸಿಪಿ ತಂಡ ಬಾಲಕಿ ತೇಜಸ್ವಿನಿ ಕುಟುಂಬಸ್ಥರನ್ನ ಪ್ರತಿಭಟನೆ ಮಾಡದಂತೆ ಮನವೋಲಿಸಿದ್ರು..
ಸದ್ಯಕ್ಕೆ ಘಟನೆ ಸಂಬಂಧ ವಿವಿಪುರಂ ಪೊಲೀಸ್ರು ಕೇಸ್ ದಾಖಲಿಸಿಕೊಂಡಿದ್ದಾರೆ. ಕಟ್ಟಡ ಮಾಲೀಕರು, ಬಿಬಿಎಮ್ ಪಿ ಅಧಿಕಾರಿಗಳಿಗೆ ನೊಟೀಸ್ ಕೊಡೋಕೆ ಸಿದ್ಧತೆ ಮಾಡ್ಕೊಳ್ತಿದ್ದಾರೆ. ಇದು ನೊಟೀಸ್ ಕೊಟ್ಟು ವಿಚಾರಣೆ ನಡೆಸೋ ಹಂತಕ್ಕೇ ಮುಗಿಯುತ್ತಾ ಅಥವಾ ಪೊಲೀಸ್ರು ಸರಿಯಾದ ಕ್ರಮ ಕೈಗೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ..