ಬೆಂಗಳೂರು: ವರ್ಷದಲ್ಲಿ 40 ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬರ್ತಿದ್ದಾ ರನ್ಯಾ ಳ ಮೇಲೆ DRI ಅಧಿಕಾರಿಗಳಿಗೆ ಡೌಟ್ ಬಂದಿತು. ಅಪ್ಪ ಹಿರಿಯ ಪೊಲೀಸ್ ಅಧಿಕಾರಿ, ಮಗಳು ಸಿನಿಮಾ ನಟಿ . ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದಳು, ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಈ ಖತರ್ನಾಕ್ ನಟಿಯನ್ನು ಈಗ ಜೈಲಿಗೆ ಅಟ್ಟಿದ್ದಾರೆ. ಈಕೆಯ ಬಂಗಾರದ ಹಿಂದಿನ ಕಥೆಗಳನ್ನ ಭೇದಿಸಲು ಅಧಿಕಾರಿಗಳು ಆಕ್ಷನ್ ಕಟ್ ಹೇಳೊಕ್ಕೆ ತಯಾರಿ ಮಾಡುತ್ತಿದ್ದಾರೆ..ನಟಿ ರನ್ಯಾ ರಾಮ್ ಳಿಂದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಅರೆಸ್ಟ್ ಆಗ್ತೀನಿ ಅಂತಾ ಕನಸು ಮನಸಲ್ಲೂ ಎಣಿಸಿರದ ನಟಿ ರನ್ಯಾ ರಾವ್ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ.ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಡಿಆರ್ ಐ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದ ಮಾಣಿಕ್ಯ ಸಿನಿಮಾ ನಟಿ ರನ್ಯಾ ರಾವ್ ರನ್ನ ಜೈಲಿಗೆ ಅಟ್ಟಿದ್ದಾರೆ, ಇನ್ನೂ 14.8 ಕೆಜಿ ಚಿನ್ನ ಸೀಜ್ ಆಗುತ್ಗೆ ಅಂತಾ ಯೋಚನೆ ಕೂಡ ಮಾಡಿರಲಿಲ್ಲ. ಅಲ್ಲದೆ ಕೇವಲ ಚಿನ್ನ ಸೀಜ್ ಮಾಡಿ ಸುಮ್ಮನಾಗದ ಡಿಆರ್ ಐ ಅಧಿಕಾರಿಗಳು ಲ್ಯಾವೆಲ್ಲಿ ರಸ್ತೆಯಲ್ಲಿ ರುವ ಐಷಾರಾಮಿ ಮನೆ ಮೇಲೆ ರೇಡ್ ಮಾಡಿ 2.5 ಕೋಟಿ ಹಣ ಕೂಡ ಸೀಜ್ ಮಾಡಿದ್ದಾರೆ.
Diabetes: ಮಧುಮೇಹಿಗಳು ಬ್ಲಾಕ್ ಕಾಫಿ ಕುಡಿದರೆ ಏನಾಗುತ್ತದೆ..? ತಜ್ಞರು ಹೇಳೋದೇನು ಗೊತ್ತಾ..?
ರನ್ಯಾ ಳ ಇಂಟೆನ್ಷನ್ ರಾಜಾರೋಷವಾಗಿ ಗೋಲ್ಡ್ ಸ್ಮಗ್ಲಿಂಗ್ ಮಾಡೋದಾಗಿತ್ತು .ಆದ್ರೆ ವಿಧಿಯಾಟ ಬೇರೆಯಾಗಿತ್ತು, ಚಿನ್ನ ಸೀಜ್ ಆಗಿ ಅರೆಸ್ಟ್ ಆಗಿದ್ದಲ್ಲದೆ 2.5 ಕೋಟಿ ಹಣ ಕೂಡ ಸೀಜ್ ಆಗಿದೆ. ರನ್ಯಾ ರಾವ್ ವಾಸಿಸುತ್ತಿದ್ದ ಲ್ಯಾವೆಲ್ಲಿ ರಸ್ತೆಯ ನಂದವಾಣಿ ಮ್ಯಾನ್ಷನ್ ಹೌಸ್ ನ ಫ್ಲ್ಯಾಟ್ ಮೇಲೆ ದಾಳಿ ನಡೆಸಿ 18 ಗಂಟೆಗಳ ಕಾಲ ಶೋಧ ನಡೆಸಿದ್ರು. 2.5 ಕೋಟಿ ಕ್ಯಾಶ್, ಕೇಜಿ ಗಟ್ಟಲೆ ಚಿನ್ನ , ದಾಖಲಾತಿ ಒಳಗೊಂಡ ನಾಲ್ಕು ದೊಡ್ಡ ದೊಡ್ಡ ಬಾಕ್ಸ್ ಗಳಲ್ಲಿ ಕೊಂಡೊಯ್ದಿದ್ದಾರೆ.
ಅಷ್ಟೇ ಅಲ್ಲದೆ ರನ್ಯಾ ಯೂಸ್ ಮಾಡ್ತಿದ್ದ ಪ್ಲಾಟ್ ಬಾಡಿಗೆ ತಿಂಗಳಿಗೆ ನಾಲ್ಕುವರೆ ಲಕ್ಷ. ವರ್ಷಕ್ಕೆ ಐವತ್ತು ಲಕ್ಷ ಪ್ಲಾಟ್ ಗೆ ರನ್ಯಾ ಬಾಡಿಗೆ ಕಟ್ಟುತ್ತಿದ್ಳಂತೆ. ಹೆಚ್ಚು ಕಡಿಮೆ ಸಿಟಿ ಔಟ್ ಸ್ಕಟ್ ನಲ್ಲಿ ಈ ಬಾಡಿಗೆ ದುಡ್ಡಲ್ಲೆ ಒಂದು ಸ್ವಂತ ಮನೆ ಖರೀದಿ ಮಾಡಬಹುದು.ಇನ್ನೂ ಒಂದು ವರ್ಷದ ಲ್ಲಿ 40 ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬರ್ತಿದ್ದಾ ರನ್ಯಾ ಳ ಮೇಲೆ DRI ಅಧಿಕಾರಿಗಳಿಗೆ ಡೌಟ್ ಬಂದು ಆಕೆ ದುಬೈನಲ್ಲಿ ಫ್ಲೈಟ್ ಹತ್ತುತ್ತಿದ್ದಂತೆ ಇತ್ತ ಬೆಂಗಳೂರು ಏರ್ ಪೋರ್ಟ್ ನಲ್ಲಿ ಎರಡು ಗಂಟೆಗಳ ಮೊದಲೇ ಕಾದು ಕುಳಿತ್ತಿದ್ದರು,
ಆಕೆಯನ್ನು ಪರಿಶೀಲನೆ ಮಾಡೋದಕ್ಕೆ ಮುಂದಾದಗ ಸ್ಥಳೀಯ ಪೊಲೀಸ್ ಬಸವರಾಜ್ ಅನ್ನೊ ಪೇದೆಯೊಬ್ಬ ಈಕೆಯನ್ನು ಪಿಕ್ ಮಾಡೋದಕ್ಕೆ ಹೋಗ್ತಿದ್ದ ಮೊನೆ ಕೂಡ ಅಧಿಕಾರಿಗಳು ರನ್ಯಾಳನ್ನ ವಶಕ್ಕೆ ಪಡೆಯೋದಕ್ಕೆ ಮುಂದಾದಗ ಈಕೆ ಯಾರ ಮಗಳು ಗೊತ್ತಾ ಎಂದು ಹೇಳಿದ್ದಾನೆ.ಇದಕ್ಕೆ ಕ್ಯಾ ರೇ ಎನ್ನದ ಅಧಿಕಾರಿಗಳು ವಶಕ್ಕೆ ಪಡೆದಾಗ ಚಿನ್ನದ ಗಟ್ಟಿ ಇರೋದು ಪತ್ತೆಯಾಗಿದೆ. ತಾನು ಹಾಕಿಕೊಂಡಿದ್ದ ಜಾಕೇಟ್ ನಲ್ಲಿಯೇ ಚಿನ್ನದ ಗಟ್ಟಿಗಳನ್ನ ಇಟ್ಟುಕೊಂಡು ಬರ್ತಿದ್ದಳು ಅನ್ನೋದು ಕನ್ಫರ್ಮ್ ಆಗಿದೆ.ಸಾಧ್ಯ ರನ್ಯಾಳನ್ನ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿರೋದು ಕನ್ಫರ್ಮ್..
ಅಭಿಷೇಕ್ ಗೌಡ ಕ್ರೈಂ ಬ್ಯೂರೋ AIN ಕನ್ನಡ