ಬಂಗಾರಪೇಟೆ – ಕೋಲಾರದಲ್ಲಿ ಭೀಕರ ಅವಘಡ ಸಂಭವಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತವಾಗಿದೆ. ಅಗ್ನಿಶಾಮಕ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಂಗಾರಪೇಟೆ ಕೆಇಬಿ ರಸ್ತೆಯಲ್ಲಿ ಬೂದಿಕೋಟೆ ರಾಜ್ ಕುಮಾರ್ ಎಂಬುವವರಿಗೆ ಸೇರಿದ 3 ಅಂತಸ್ತಿನ ಕಟ್ಟಡ ಇಧೀಗ ಕುಸಿದಿದೆ.
ಕಟ್ಟಡದಲ್ಲಿದ್ದ ಮೂರು ಪ್ರತ್ಯೇಕ ಕುಟುಂಬದ ಸದಸ್ಯರು ಬಚಾವ್ ಆಗಿದ್ದಾರೆ. ಗ್ರೌಂಡ್ ಪ್ಲೋರ್ ಗೋಡೆ ರಿಪೇರಿ ವೇಳೆ ಧಿಡೀರ್ ಮೇಲಿನ ಕಟ್ಟಡಗಳು ಕುಸಿತವಾಗಿದ್ದು ದೊಡ್ಡ ಅನಾಹುತ ತಪ್ಪಿದೆ. ಮನೆ ಕಟ್ಟಡ ವಾಲಿದ್ದರೂ ಮಾಲೀಕ ನಿರ್ಲಕ್ಷ ವಹಿಸಿದ್ದೆ ದುರಂತಕ್ಕೆ ಪ್ರಮುಖ ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.
Friday Tips: ಶುಕ್ರವಾರ ಬೆಳಗ್ಗೆ ಈ ಕೆಲಸ ಮಾಡಿದರೆ ಬೇಡವೆಂದರೂ ಧನ ಲಕ್ಷ್ಮಿ ಒಲಿಯುವಳು.!
ಅಗ್ನಿಶಾಮಕ ದಳ ಸಿಬ್ಬಂದಿ ಸೂಕ್ತ ಸಮಯಕ್ಕೆ ಸ್ಥಳಕ್ಕಾಗಮಿಸಿ ಅನಾಹುತ ತಪ್ಪಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತು ತ್ವರಿತವಾಗಿ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಮನೆಯಲ್ಲಿದ್ದ ಎಲ್ಲರನ್ನು ಹೊರಕ್ಕೆ ಕಳುಹಿದ್ದಾರೆ. ನಂತರ ಕಟ್ಟಡ ನೆಲಸಮವಾಗಿದೆ. ಕಟ್ಟಡ ಬಿದ್ದು ದಟ್ಟವಾದ ಧೂಳು ಆವರಿಸಿ ಕಾರ್ಯಾಚರಣೆ ನಡೆಸುವ ಕಾರಣ ಕೆಇಬಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.