ಕಾರವಾರ: ಬಾಬರಿ ಮಸೀದಿ (Babri Masjid) ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೆದರಿಕೆ ಅಂತ ಬೇಕಾದ್ರೆ ತಿಳಿಯಿರಿ, ಬಾಬರಿ ಮಸೀದಿಯಂತೆ ಭಟ್ಕಳದ ಮಸೀದಿಯನ್ನೂ ನಿರ್ನಾಮ ಮಾಡುವುದು ಗ್ಯಾರಂಟಿ ಎಂದು ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದರು, ಬಾಬರಿ ಮಸೀದಿಯಂತೆ ಭಟ್ಕಳದ ಮಸೀದಿಯನ್ನೂ (Mosque) ನಿರ್ನಾಮ ಮಾಡುವುದು ಗ್ಯಾರಂಟಿ. ಇದು ಅನಂತಕುಮಾರ ಹೆಗಡೆ ತೀರ್ಮಾನವಲ್ಲ, ಹಿಂದೂ ಸಮಾಜದ ತೀರ್ಮಾನ ಎಂದು ಹೇಳಿದ್ದಾರೆ. ಶಿರಸಿಯ ಸಿಪಿ ಬಜಾರ್ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ.
ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದು ಕೆಂಡ ಕಾರಿದ್ದಾರೆ.