ಬೆಂಗಳೂರು: ಸಂಕ್ರಾಂತಿ ಹಬ್ಬದಂದೇ ನಗರದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ಸ್ಥಳದಲ್ಲೇ ಯುವಕ ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ನಡೆದಿದೆ.
ಮೆಲ್ವಿನ್ ಜೋಸ್ವಾ(25) ಮೃತಪಟ್ಟ ಯುವಕನಾಗಿದ್ದು ಬಾಣಸವಾಡಿ ಸಮೀಪದ ಸಿಎಂಆರ್ ರೋಡ್ ನಲ್ಲಿ ಮಧ್ಯ ರಾತ್ರಿ 2.30 ಸುಮಾರಿಗೆ ನಡೆದಿರುವ ಘಟನೆಯಾಗಿದೆ.
ಕಾರಿನ ನಿಯಂತ್ರಣ ತಪ್ಪಿ ಮೊದಲು ಮರಕ್ಕೆ ಡಿಕ್ಕಿ ಹೊಡೆದಿದ್ದು ಬಳಿಕ ಮರದ ಕೆಳಗೆ ನಿಂತಿದ್ದ ಕಾರು ಹಾಗೂ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೆಯುವಕ ಸಾವನ್ನಪ್ಪಿದ್ದಾನೆ
ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.