ಕೋವಿಡ್ ವೈರಸ್ ಜಗತ್ತನ್ನು ಕಾಡಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿರುವ ಕುರಿತು ವರದಿಯಾಗಿದೆ. ಅದುವೇ, ‘ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್’ ಈ ವರ್ಷ ಆರಂಭದಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಇದು. ನೆರೆಯ ರಾಷ್ಟ್ರಗಳು ಈ ವೈರಸ್ ಪತ್ತೆ ಮಾಡುವ ನಿಟ್ಟಿನಲ್ಲಿ ಸ್ಕ್ರೀನಿಂಗ್ ಹಾಗೂ ಪ್ರತ್ಯೇಕತೆಯ ಪ್ರೋಟೋಕಾಲ್ಗಳನ್ನು ಘೋಷಿಸಲು ಮುಂದಾಗಿವೆ.
ಎಚ್ ಎಂಪಿವಿ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?
ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ಡಿಸೆಂಬರ್ 27 ರಂದು, ಅಪರಿಚಿತ ಮೂಲದ ನ್ಯುಮೋನಿಯಾ ಪ್ರಕರಣಗಳ ಮೇಲೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂಬ ಮಾತನ್ನು ಹಂಚಿಕೊಂಡಿತ್ತು. ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿರುವದರಿಂದ ಡಿಸೆಂಬರ್ 16 ಮತ್ತು 22 ರ ನಡುವೆ ಉಸಿರಾಟದ ಸೋಂಕುಗಳ ಹೆಚ್ಚಳವನ್ನು ತೋರಿಸುವ ಡೇಟಾವನ್ನು ಕೂಡ ಹಂಚಿಕೊಂಡಿತ್ತು.
ದಾಲ್ಚಿನ್ನಿ ಎಲೆ ಅಡುಗೆಗೆ ಮಾತ್ರವಲ್ಲ ದೇಹಕ್ಕೂ ನೀಡುತ್ತದೆ ಆರೋಗ್ಯಕಾರಿ ಪ್ರಯೋಜಗಳು!
ಚಳಿಗಾಲ ಮತ್ತು ವಸಂತಕಾಲದಲ್ಲಿ ಚೀನಾದಲ್ಲಿ ವಿವಿಧ ರೀತಿಯ ಉಸಿರಾಟದ ಸೋಂಕುಗಳು ಕಂಡು ಬರುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿ ಕಾನ್ ಬಿಯಾವೊ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಜೊತೆಗೆ, ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಉಲ್ಲೇಖಿಸಿದ್ದರು.
ಉತ್ತರ ಚೀನಾದಲ್ಲಿ ಹರಡಿರುವ ಎಚ್ಎಂಪಿವಿ ವೈರಸ್
ಚೀನಾದ ಆರೋಗ್ಯ ಅಧಿಕಾರಿಗಳು ದೇಶದ ಉತ್ತರ ಭಾಗಗಳಲ್ಲಿ ವೈರಸ್ ಹರಡುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ. ಎಚ್ಎಂಪಿವಿ ಎಂದು ಕರೆಯಲ್ಪಡುವ ಈ ವೈರಸ್ ಎಲ್ಲಾ ವಯಸ್ಸಿವರಲ್ಲಿಯೂ ಕಂಡುಬರಬಹುದು. ಆದರೆ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಹಾಗಾಗಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಅದರಲ್ಲಿಯೂ ಅಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ಸಾಮಾಜಿಕ ಮಾಧ್ಯಮ ವರದಿಗಳು ಕೂಡ ಇದನ್ನು ಸಾಬೀತುಪಡಿಸಿದೆ.
ಎಚ್ಎಂಪಿವಿ ರೋಗಲಕ್ಷಣಗಳು;
ಮಾಧ್ಯಮ ವರದಿಗಳ ಪ್ರಕಾರ, ಎಚ್ಎಂಪಿವಿ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ಹಾಗಾಗಿ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವೈರಸ್ ಹೆಚ್ಚಾಗಲು 3 ರಿಂದ 6 ದಿನಗಳನ್ನು ತೆಗೆದುಕೊಳ್ಳುತ್ತದೆ, ರೋಗಲಕ್ಷಣಗಳು ತೀವ್ರತೆಯ ಆಧಾರದ ಮೇಲೆ ವಿಭಿನ್ನ ಅವಧಿಯ ವರೆಗೆ ಇರುತ್ತದೆ.
ಎಚ್ ಎಂಪಿವಿ ಹೇಗೆ ಹರಡುತ್ತದೆ?
ಎಚ್ಎಂಪಿವಿ ಇತರ ಉಸಿರಾಟದ ವೈರಸ್ಗಳಂತೆ ಹರಡುತ್ತದೆ:
– ಕೆಮ್ಮು ಮತ್ತು ಸೀನುವಿಕೆ
– ಕೈ ಕುಲುಕುವುದು ಅಥವಾ ವ್ಯಕ್ತಿಯ ನಿಕಟ ಸಂಪರ್ಕ
– ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಅಥವಾ ಮುಖವನ್ನು ಸ್ಪರ್ಶಿಸುವುದು (ಬಾಯಿ, ಮೂಗು ಅಥವಾ ಕಣ್ಣುಗಳು).
ಎಚ್ ಎಂಪಿವಿ ರೋಗಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?
ಎಚ್ ಎಂಪಿವಿ ಅಥವಾ ನೆಗಡಿಯ ರೋಗಲಕ್ಷಣಗಳನ್ನು ಕಂಡು ಬರುವುದಕ್ಕಿಂತ ಮುಂಚೆಯೇ ಈ ಸರಳ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ಯಾವುದೇ ರೀತಿಯ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
– ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ: ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂ ಬಳಸಿ.
– ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ: ವೈರೆಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಿ.
– ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ: ಸೋಂಕು ಹರಡುವುದನ್ನು ತಡೆಯಲು ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
– ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಇರಿ: ವೈರಸ್ ಇತರರಿಗೆ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ.