ತುಮಕೂರು:- ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ ಘಟನೆ ಜರುಗಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಇದು ಪಕ್ಕಾ ರಿಸಲ್ಟ್: ಈರುಳ್ಳಿ ಇದರಲ್ಲಿ ನೆನೆಯಿಟ್ಟು ತಿಂದ್ರೆ ವಾರಗಟ್ಟಲೇ ಸುಗರ್ ಹೆಚ್ಚಲ್ವಂತೆ!
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ಘಟನೆ ಜರುಗಿದೆ. ಎರಡು ಕಾರುಗಳ ಮುಖಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಮಹಿಳೆಗೆ ಮತ್ತು ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಒಂದು ಕಾರಿನಲ್ಲಿ ಇಬ್ಬರು ಮತ್ತೊಂದು ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮೃತರ ಗುರುತು ಪತ್ತೆ ಆಗಿಲ್ಲ. ಸ್ಥಳಕ್ಕೆ ಮಧುಗಿರಿ ಪಿಎಸ್ ಐ ವಿಜಯ್ ಕುಮಾರ್ ಭೇಟಿ ಪರಿಶೀಲನೆ ಮಾಡಿದ್ದಾರೆ. ಅಪಘಾತ ಕಾರುಗಳ ತೆರವು ಕಾರ್ಯಾಚರಣೆ. ನಡೆದಿದ್ದು, ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಸಿಯಾಜ್ ಮಾರುತಿ ಕಾರು ತುಮಕೂರು ಕಡೆಯಿಂದ ಬರುತ್ತಿತ್ತು.. ಟಾಟ ಟಿಯಾಗೋ ಮಧುಗಿರಿ ಕಡೆಯಿಂದ ತುಮಕೂರು ಕಡೆ ಹೋಗುತ್ತಿತ್ತು ಎನ್ನಲಾಗಿದೆ.