ರಾಮನಗರ:– ರಾಮನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಲಿಕೆರೆ ಗುನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಆರ್.ಎಸ್. ಬೆಟ್ಟ ಎಕೋ ಎಸ್ಟಿಪಿ ಮತ್ತು ಗೋಬರ್ಧನ ಘಟಕ ಹಾಗೂ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆ ಗ್ರಾಮ ಪಂಚಾಯಿತಿಯ ಎಂಆರ್ಎಫ್ (ಮಟಿರೀಯಲ್ ರಿಕವರಿ ಫೆಸಿಲಿಟಿ) ಘಟಕ ವೀಕ್ಷಣೆ ಮಾಡಲು 5 ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯ ಕಚೇರಿಯಿಂದ ಅನುಷ್ಠಾನ ಬೆಂಬಲಿತ ಸಂಸ್ಥೆ (ಐಎಸ್ಎ) ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಇಂದು ಭೇಟಿ ನೀಡಿ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪಕಾರ್ಯದರ್ಶಿ ಚಿಕ್ಕಸುಬ್ಬಯ್ಯ, ರಾಜ್ಯ ಕಚೇರಿಯ ಎಚ್ಆರ್ಡಿ, ಎಸ್ಎಸ್ಡಬ್ಲ್ಯೂಎಂ ಹಾಗೂ ಇತರೆ ರಾಜ್ಯ ಸಂಯೋಜಕರು, ಕಾರ್ಯಪಾಲಕ ಅಭಿಯಂತರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸ್ವಚ್ಛ ಭಾರತ್ ಮತ್ತು ಜಲಜೀವನ್ ಯೋಜನೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಸಂಯೋಜಕರು ಉಪಸ್ಥಿತರಿದ್ದರು.