ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಜಾಕವೆಲ್ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ರಬಕವಿ ಮಹಿಷವಾಡಗಿ ಬ್ಯಾರೇಜ್ ಕಾಮಗಾರಿ ತಾತ್ಕಾಲಿಕ ಸ್ಥಗಿತಗೊಂಡು ಅಸ್ತಿ ಪಂಜರದಂತೆ ಬ್ಯಾರೇಜ್ ಅನಾಥವಾಗಿ ನಿಂತಿರುವದು ಬೇಸರ ತರುವಲ್ಲಿ ಕಾರಣವಾಗಿತ್ತು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ನಿರೀಕ್ಷಣಾ ಮಂದಿರದಲ್ಲಿ ನಾಳೆ ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವೀಕ್ಷಣೆಗೆ ಬೆಂಗಳೂರಿನ ಪಿಡಬ್ಲ್ಯೂಡಿ ತಂಡ ಭೇಟಿ ನೀಡಲಿದೆ, ಅದರ ಕುರಿತು ಪೂರ್ವಭಾವಿ ಸಭೆ ನಡೆಯಿತು.
2018 ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು 30. 26 ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟ್ರಕ್ಸನ್ಸ್ ಕಂಪನಿಗೆ ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕಾಮಗಾರಿ ನಡೆದಿದೆ. ಇದಕ್ಕೆ ಪೂರಕವಾಗಿ 2021 ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು 10 ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು.
ಇದೀಗ ಸುಮಾರು ಮುಕ್ಕಾಲು ತಿಂಗಳದಿಂದ ಸಹ ಗುತ್ತಿಗೆಯನ್ನು ಪಡೆದಿರುವ ತೇಜಸ್ ಕನಸ್ಟಂಕ್ಷನ್ಸ್ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಅಲ್ಲಿಂದ ಕಾಮಗಾರಿಗೆ ಸಂಬಂಧಿಸಿದ ಯಂತ್ರಗಳೆಲ್ಲವನ್ನೂ ಸ್ಥಳಾಂತರಗೊಳಿಸಿ ಕಾಲ್ಕಿತ್ತಿದ್ದಿರು. ಕಾಮಗಾರಿ ವಿಳಂಬವಾಗಿ ತಾತ್ಕಾಲಿಕ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ಯಾವದೇ ಕ್ರಮ ಕೈಗೊಳ್ಳದಿರುವದು ರಬಕವಿ ಜನತೆಗೆ ಬೇಸರ ಮೂಡಿಸುವಲ್ಲಿ ಕಾರಣವಾಗಿದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಬಕವಿ ನಗರದ ಸಾರ್ವಜನಿಕರು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು, ಶೀಘ್ರವೇ ಕಾಮಗಾರಿ ಪುನರ್ಪ್ರಾರಂಭಿಸಬೇಕೆಂಬುದು ನಾಗರಿಕರ ಒತ್ತಾಯವಾಗಿದೆ. ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ಮುಗಿಸಲು ಇನ್ನೂ ಎಷ್ಟು ವರ್ಷ ಬೇಕೆಂಬುದು ಜನರಿಗೆ ತಿಳಿಯದಂತಾಗಿದೆ. ಅರ್ಧಕ್ಕೆ ನಿಂತ ರಬಕವಿ ಮಹೇಶವಾಡಗಿ ಬ್ರಿಜ್ ಕಾಮಗಾರಿ ವೀಕ್ಷಿಸಲು ನಾಳೆ ಬೆಂಗಳೂರಿನ ತಂಡ ಭೇಟಿ ನೀಡಿ ಪರಿಶೀಲನೆ ಮಾಡಲಿದೆ ಎಂದು ಹೇಳಿದರು.
ನಾಳೆ ಭೇಟಿ ನೀಡಲಿರುವ ಬೆಂಗಳೂರಿನ ತಂಡ ಅರ್ಧಕ್ಕೆ ನಿಂತ ಕಾಮಗಾರಿ ಯಾವ ಕಾರಣಕ್ಕೆ ನಿಂತಿದೆ ಎಂಬುದು ಸೂಕ್ತವಾದ ಮಾಹಿತಿ ನೀಡಬೇಕು. ಕೂಡಲೇ ಅರ್ಧಕ್ಕೆ ನಿಂತ ರಬಕವಿ ಮಹೇಶವಾಡಗಿ ಬ್ರಿಜ್ ಕಾಮಗಾರಿಯನ್ನ ಚಾಲನೆ ನೀಡಿ ನಮಗೆ ನ್ಯಾಯ ಒದಗಿಸಿ ಕೊಡಬೇಕು. ಇಲ್ಲದಿದ್ದರೆ ನಾವು ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ರಬಕವಿ ನಗರದ ಹಿರಿಯರಾದ ರಾಮಣ್ಣ ಹುಲಕುಂದ. ನೀಲಕಂಠ ಮುತ್ತುರ. ಗಣಪತಿ ಹಜಾರೆ. ಬಸವರಾಜ ತೆಗ್ಗಿ. ಮಹಾದೇವ ದೂಪದಾಳ. ಡಾ ರವಿ ಜಮಖಂಡಿ. ರವಿ ಗಡಾದ. ಸಂಜಯ ತೆಗ್ಗಿ. ದರಪ್ಪ ಉಳ್ಳಾಗಡ್ಡಿ. ಸಂಜು ಜೋತಾವರ. ಸಂಜಯ ತೇಲಿ ಚಿದಾನಂದ ಗಾಳಿ. ಬಸವರಾಜ್ ಯಂಡಿಗೇರಿ. ಇಂದ್ರು ಲಾಳಕೆ. ಕೃಷ್ಣ ಲೇಂಡಿ. ಸತೀಶ್ ಹಜಾರೆ. ಪ್ರವೀಣ ಆನಂದ ಜುಗಳಿ. ಹಜಾರೆ. ಸಂಗಪ್ಪ ಮಡಿವಾಳ. ಸಂಗಪ್ಪ ಕುಂದಗೋಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ