ಧಾರವಾಡ:- ಇಲ್ಲಿನ ಕಲಿಕೇರಿ ಗ್ರಾಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಶ್ರೀರಾಮ ವಿಗ್ರಹ ಪತ್ತೆಯಾಗಿದೆ.
ಗ್ರಾಮದ ಹೊರಭಾಗದಲ್ಲಿ ಕೆರೆಯ ದಂಡೆಯಲ್ಲಿ ಶ್ರೀರಾಮ ವಿಗ್ರಹ ಪತ್ತೆಯಾಗಿದೆ. ಗ್ರಾಮಸ್ಥರು ಜೆಸಿಬಿ ಮೂಲಕ ಕಚ್ಚಾ ರಸ್ತೆ ದುರಸ್ತಿ ನಡೆಸುತ್ತಿದ್ದಾಗ ದೊಡ್ಡ ಕಲ್ಲು ಪತ್ತೆಯಾಗಿದೆ. ಕಲ್ಲಿನಲ್ಲಿ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ರೂಪಗಳಿವೆ.
ಮೇಲ್ಭಾಗದಲ್ಲಿ ಶಿವ-ಪಾರ್ವತಿ ಕೆತ್ತನೆ, ಕೆಳಭಾಗದಲ್ಲಿ ಶ್ರೀರಾಮನ ಕೆತ್ತನೆಯಿದೆ. ವಿಗ್ರಹ ಕಂಡು ಅಚ್ಚರಿಗೊಂಡ ಸ್ಥಳೀಯರು ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ