ಬಾರ್ಬಡೋಸ್ನಲ್ಲಿನ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಆಟಗಾರರು ಇಂದು ತಾಯ್ನಾಡು ಭಾರತಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದ ಟೀಂ, ಮೊದಲು ಪ್ರಧಾನಿಯನ್ನು ಭೇಟಿ ಮಾಡಿದೆ. ಈ ವೇಳೆ ಬಾಟ್ಸ್ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರ ಲುಕ್ ಎಲ್ಲರ ಗಮನ ಸೆಳೆದಿದೆ
https://ainlivenews.com/what-was-a-shame-then-now-an-honor-remember-those-days/
ಯೆಸ್. ಜೈಸ್ವಾಲ್ ಅವರು ಹೊಸ ಹೇರ್ಸ್ಟೈಲ್ನಲ್ಲಿ ಇಂದು ಕಾಣಿಸಿಕೊಂಡಿದ್ದರು. ಹೀಗಾಗಿ ಅವರ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಅವರ ಫೋಟೋ ಇಟ್ಟುಕೊಂಡು ಹಲವು ಮೀಮ್ಸ್ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ
https://ainlivenews.com/big-gift-from-bcci-to-the-winning-indian-team/
ʼತಾಯಿ ನಿಮ್ಮ ಕೂದಲನ್ನು ಬಾಚಿದಾಗʼ ಎಂದು ಪುಟ್ಟ ಮಗು ಹಾಗೂ ಜೈಸ್ವಾಲ್ ಫೋಟೋ ಕೊಲಾಜ್ ಮಾಡಿ ಹರಿಬಿಡಲಾಗಿದೆ. ಇನ್ನೂ ಕೆಲವರು ಪೋಷಕರು ಶಿಕ್ಷಕರ ಸಭೆಯಲ್ಲಿ ಭಾಗವಹಿಸಲು ಹೋಗುವಾಗ ಮಕ್ಕಳ ಮುಖದಂತೆ ಜೈಸ್ವಾಲ್ ಮುಖ ಇಲ್ಲಿ ಮುಗ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಹೀಗೆ ಹಲವಾರು ಮೀಮ್ಸ್ಗಳು ಬರುತ್ತಿವೆ.