ಬೆಂಗಳೂರು:- ಕಾಲೇಜು ಕಟ್ಟಡದಿಂದ ಜಿಗಿದು ಬೆಂಗಳೂರಿನಲ್ಲಿ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
ನಿಮಗೆ ಪದೇ ಪದೇ ನಿದ್ದೆಯಿಂದ ಎಚ್ಚರವಾಗುತ್ತಾ!? ಹಾಗಿದ್ರೆ ಇದನ್ನು ದಿಂಬಿನ ಕೆಳಗಿಡಿ!
ನಗರದ ಬಸವನಗುಡಿಯಲ್ಲಿರುವ ಬಿಎಂಎಸ್ ಕಾಲೇಜಿನಲ್ಲಿ ಅವಘಡ ಸಂಭವಿಸಿದೆ. ಆಕರ್ಷ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎನ್ನಲಾಗಿದೆ. 4ನೇ ವರ್ಷದ ಏರೋಸ್ಪೇಸ್ ಓದುತ್ತಿದ್ದರು. ಘಟನಾ ಸ್ಥಳಕ್ಕೆ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಲ್ಲದೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರಿಂದ ತನಿಖೆ ಮುಂದುವರಿದಿದೆ.