ಬೆಂಗಳೂರು:– ರಾಜಧಾನಿ ಬೆಂಗಳೂರಿನ ಬಾಪೂಜಿನಗರದ Al ಫಹಾದ್ ಶಾಲೆಯಲ್ಲಿ ಪ್ರಾಂಶುಪಾಲರು ಬೈದರೆಂದು ವಿದ್ಯಾರ್ಥಿನಿ ಶಾಲೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ಬೆಂಗಳೂರು ಗೋಲ್ಡ್ ಶಾಪಿಂಗ್ ಫೆಸ್ಟಿವಲ್ 3ನೇ ಆವೃತ್ತಿಗೆ ಚಾಲನೆ: ಪರಿಷತ್ ಶಾಸಕ ಟಿಎ ಶರವಣ ಭಾಗಿ!
ಗಂಭೀರವಾಗಿ ಗಾಯಗೊಂಡಿರುವ 10ನೇ ತರಗತಿ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬಾಲಕಿ ಕಟ್ಟಡದಿಂದ ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಇದುವರೆಗೂ ಯಾರು ದೂರು ನೀಡಿಲ್ಲ. ಸದ್ಯ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.