2024ರ ಪ್ಯಾರಿಸ್ ಒಲಿಂಪಿಕ್ಸ್ನ ಸ್ಟಾರ್ ಆಟಗಾರ್ತಿ ಮನು ಭಾಕರ್ ಅವರು ಅಮೋಘವಾದ ಸಾಧನೆ ಮಾಡಿದ್ದಾರೆ. ಈಗಾಗಲೇ 2 ಕಂಚಿನ ಮೆಡಲ್ ಗೆದ್ದು ಈಗ ಹ್ಯಾಟ್ರಿಕ್ ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇದು ಹೀಗಿರುವಾಗಲೇ ಅವರ ಬಳಿಗೆ ಹಣದ ಹೊಳೆಯೇ ಹರಿದು ಬರುತ್ತಿದೆ.
Olympics Badminton: ಒಲಂಪಿಕ್ʼನ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ನುಚ್ಚು ನೂರು!
ಮನು ಭಾಕರ್ ಅವರನ್ನು 40 ವಿವಿಧ ಬ್ರ್ಯಾಂಡ್ ಕಂಪನಿಗಳು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ. ಈ ಮೊದಲು ಮನು ಭಾಕರ್ ಅವರು ಕೇವಲ 20ರಿಂದ 25 ಲಕ್ಷ ರೂಪಾಯಿಗಳನ್ನು ಪಡೆದು ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಇದು ಬದಲಾಗಿದೆ. ಒಲಿಂಪಿಕ್ಸ್ನಲ್ಲಿ ತಮ್ಮ ಸಾಧನೆ ಹೊರ ಹೊಮ್ಮುತ್ತಿದ್ದಂತೆ ಬರೋಬ್ಬರಿ 40 ವಿವಿಧ ಬ್ರ್ಯಾಂಡ್ ಕಂಪನಿಗಳು ಮನು ಭಾಕರ್ಗೆ ಕೋಟಿ ಕೋಟಿ ಆಫರ್ ನೀಡಲು ಮುಂದಾಗಿದೆ.
ತಮ್ಮ ಕಂಪನಿಯ ಜಾಹೀರಾತು ಮಾಡಿಕೊಡುವಂತೆ ಕೇಳಿಕೊಂಡು ಬಂದಿವೆ ಎನ್ನಲಾಗಿದೆ. ಇದರ ಜೊತೆಗೆ ಅವರ ಸಂಭಾವನೆ 20-25 ಲಕ್ಷದಿಂದ 1.5 ಕೋಟಿ ರೂಪಾಯಿವರೆಗೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.