ಕಲಬುರಗಿ: ಮನೆಯ ಬುನಾದಿ ತೋಡುವ ವೇಳೆ ಸೂರ್ಯ ದೇವನ ಮೂರ್ತಿ ಪತ್ತೆಯಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಶಹಬಾದ್ ತಾಲೂಕಿನ ತೊನಸನಹಳ್ಳಿಯಲ್ಲಿ ಮೂರ್ತಿ ಪತ್ತೆಯಾಗಿದ್ದು ಬಸವರಾಜ ಹೂಗಾರ ಎಂಬುವವರು ಮನೆ ಕಟ್ಟಲು ಪಾಯ ತೋಡುವಾಗ ಮೂರ್ತಿ ದೊರೆತಿದೆ..
ಈ ಮೂರ್ತಿ12 ನೇ ಶತಮಾನದ ಕಾಲದ್ದು ಎನ್ನಲಾಗಿದೆ.27 ಇಂಚು ಎತ್ತರ 15 ಇಂಚು ಅಗಲ 3 ಇಂಚು ದಪ್ಪವಿದೆ. ಸಂಶೋಧಕ ಡಿ ಎನ್ ಅಕ್ಕಿಯವರ ಪ್ರಕಾರ ಮೂರ್ತಿ ಕಲ್ಯಾಣಿ ಚಾಲುಕ್ಯರ ಕಾಲದ್ದು ಅಂತ ಹೇಳಲಾಗ್ತಿದೆ.