ಮಂಡ್ಯ : ನಗರದ ಸೌಂದರ್ಯವನ್ನ ಹೆಚ್ಚಿಸುವ ಸಲುವಾಗಿ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡುವ ಹಿನ್ನೆಲೆ ಮಂಡ್ಯದ ನಾಲ್ಕು ಕಡೆ ಅತ್ಯಾಧುನಿಕ ಹೈಟೆಕಚ ಗ್ರೀನ್ ಮ್ಯಾಟ್ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಮಂಡ್ಯ ಶಾಸಕ ಗಣಿಗ ರವಿಕುಮಾರ್ ನಗರದ ಸೌಂದರ್ಯ ವೃದ್ದಿಗೆ ಪಣ ತೊಟ್ಟಿದ್ದಾರೆ. ಇದರ ಫಲವಾಗಿ ನಗರದ ನಾಲ್ಕು ಕಡೆ ಹೈಟೆಕ್ ಗ್ರೀನ್ ಮ್ಯಾಟ್ ಕ್ರೀಡಾಂಗಣ ಸ್ಥಾಪನೆ ಮುಂದಾಗಿದ್ದಾರೆ.
ಇದರ ವಿನ್ಯಾಸ ಕಾರ್ಯ ಈಗಾಗಲೇ ಮುಗಿದಿದ್ದು, ನಗರದ ನಾಲ್ಕು ಕಡೆ ಈ ಹೈಟೆಕ್ ಗ್ರೀನ್ ಮ್ಯಾಟ್ ಕ್ರೀಡಾಂಗಣ ನಿರ್ಮಾಣವಾಗಲಿದೆ. ಅಂಕಿ ಸಂಖ್ಯೆ ಇಲಾಖೆ ಸುಮಾರು ಒಂದೂವರೆ ಕೋಟಿ ಹಣವನ್ನು ವ್ಯಯಿಸುತ್ತಿದ್ದು, ಒಂದು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದೆ.
ಸಿದ್ದರಾಮಯ್ಯ ಬೆಂಕಿ ಇದ್ದಂಗೆ; ಮುಟ್ಟಿದರೆ ಭಸ್ಮ ; ಜಮೀರ್ ರೋಷಾವೇಶದ ಮಾತು
ಇನ್ನು ಈ ಕ್ರೀಡಾಂಗಣದಲ್ಲಿ ಗ್ರೀನ್ ಮ್ಯಾಟ್ ಜೊತೆಗೆ ಹೊನಲು ಬೆಳಕಿನ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮರ್ಕ್ಯುರಿ ಬಲ್ಪ್ಗಳನ್ನ ಅಳವಡಿಸಲಾಗಿದೆ. ಕ್ರಿಕೆಟ್, ಕಬ್ಬಡಿ, ಬ್ಯಾಡ್ಮಿಂಟನ್ ಸೇರಿದಂತೆ ಅನೇಕ ಕ್ರೀಡೆಗಳನ್ನ ಈ ಕ್ರೀಡಾಂಗಣದಲ್ಲಿ ಆಡಲು ವ್ಯವಸ್ಥೆ ಮಾಡಲಾಗುತ್ತಿದ್ದು, ವಾಕಿಂಗ್ ಮಾಡೋರಿಗೂ ಕೂಡ ಪ್ರತ್ಯೇಕವಾಗಿ ಪಾಥ್ ನಿರ್ಮಾಣ ಮಾಡಲಾಗುದೆ. ಸದ್ಯ ಈ ಬಗ್ಗೆ ನಿರ್ಮಿತಿ ಕೇಂದ್ರ ಪ್ಲಾನ್ ಸಿದ್ದಪಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.