ಹುಬ್ಬಳ್ಳಿ: ಇಲ್ಲಿಯ ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ಬಳಿ ಚಾಕು ಇರಿತಕ್ಕೊಳಗಾಗಿದ್ದ ಇಬ್ಬರಲ್ಲಿ ಒಬ್ಬ ಯುವಕ ಕೆಎಂಸಿಆರ್ಐನಲ್ಲಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಹುಬ್ಬಳ್ಳಿ: ಕನ್ನಡ ಕುಟೀರ ಕಚೇರಿಯಲ್ಲಿ ನೂತನ ವರ್ಷದ ಕನ್ನಡ ಕ್ಯಾಲೆಂಡರ್ ಬಿಡುಗಡೆ!
ಸಮೀರ್ ಶೇಖ್ (18) ಮೃತ ಯುವಕ. ಡಿ. 30ರಂದು ಸಮೀರ್ ಶೇಖ್ ಹಾಗೂ ಅವರ ಚಿಕ್ಕಪ್ಪ ಜಾವೇದ್ ಶೇಖ್ ಎಂಬುವವರಿಗೆ ಮುಜಾಮಿಲ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಾಯಗೊಂಡಿದ್ದ ಇಬ್ಬರಿಗೆ ಕೆಎಂಸಿಆರ್ಐಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಸಮೀರ್ ಮೃತಪಟ್ಟಿದ್ದಾನೆ.
ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಕುವಿನಿಂದ ಇರಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಜಾಮಿಲ್ ಮಗಾಮಿ ಎಂಬಾತನನ್ನು ಪೊಲೀಸರು ಬಂಧಿಸಿ ಕಾಲಿಗೆ ಗುಂಡು ಹೊಡೆದಿದ್ದರು. ಈಗ ಮತ್ತೆ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪಠಾಣ ಗಲ್ಲಿಯ ಮೊಹ್ಮದ್ ಹನೀಫ್ ಮಗಾಮಿ (29), ಆನಂದ ನಗರದ ಖಾಲಿದ್ಮಿಯಾ ಮುಲ್ಲಾ (27), ಮೊಹ್ಮದ್ ಇನ್ಸಾಲ್ (29), ಮೊಹ್ಮದ್ ಶಾರುಖ್ (23), ರಬ್ಬಾನಿ ಹಳೇಮನಿ (32), ಇಸ್ಲಾಂಪುರದ ಅಹಮದ್ ಹಜಾರೆಸಾಬ್ (55) ಎಂಬುವವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷಮರ್ ಕೆಎಂಸಿಆರ್ ನ ಶವಾಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.