ಗದಗ: ಜಿಲ್ಲೆಯ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆಮಾಡಿದೆ. ಬೆಳಿಗ್ಗೆಯಿಂದ ಹಲವು ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಸಾವಿರಾರು ಭಕ್ತರು ತ್ರಿಕೂಟೇಶ್ವರನ ದರ್ಶನ ಪಡೆಯುತ್ತಿದ್ದಾರೆ. ಇದು ಐತಿಹಾಸಿಕ ಹಾಗೂ ಬೇಡಿದ ವರಗಳನ್ನು ನೀಡುವ ಇಷ್ಟಾರ್ಥ ದೇವರಾಗಿವೆ.
ತ್ರಿಕೂಟೇಶ್ವರ ದೇವಸ್ಥಾನದ ವಿಶೇಷ ಅಂದ್ರೆ ಒಂದೇ ಪಾಣ ಬಟ್ಟಲಿನಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರ ಉದ್ಭವ ಲಿಂಗುವಿದೆ. ಜೊತೆಗೆ ಸಾವಿತ್ರಿ-ಸರಸ್ವತಿ-ಗಾಯತ್ರಿ ದೇವತೆಗಳನ್ನು ಸಹ ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. ಆದ್ದರಿಂದ ಈ ಐತಿಹಾಸಿಕ ದೇವಸ್ಥಾನಕ್ಕೆ ಗದಗ ಅಷ್ಟೇ ಅಲ್ಲಾ ಸುತ್ತಮುತ್ತಲಿನ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು ಪುನಿತರಾಗುತ್ತಿದ್ದಾರೆ.
ಚಾಮರಾಜನಗರದಲ್ಲಿ ಮಹಾಶಿವರಾತ್ರಿ ಸಂಭ್ರಮ ; ಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ
ಮಹಾ ಶಿವರಾತ್ರಿ ಅಂಗವಾಗಿ ಬಿಲ್ವಾರ್ಚನೆ, ಕ್ಷೀರಾಭಿಷೇಕ, ಎಳೆ ನೀರು ಅಭಿಷೇಕ, ರುದ್ರಾಭಿಷೇಕ, ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಯಾಮ ಪೂಜೆ, ಮಹಾ ಮಂಗಳಾರತಿ ಹೀಗೆ ಅನೇಕ ವಿಶೇಷ ಪೂಜೆಗಳು ನಡೆಯಲಿವೆ. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.