ಶಿವಮೊಗ್ಗ: ಸುಮಾರು 16 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ.ಭಾರತೀಯ ಸೇನೆಯಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿ ಇಂದು ಹುಟ್ಟೂರಾದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಡಗಂಟಿಗೆ ಆಗಮಿಸಿದ ಸೈನಿಕನಿಗೆ ವಿದ್ಯಾರ್ಥಿಗಳು,
ವಿವಿಧ ಸಂಘಟನೆಗಳು ಸೇರಿ ಸಾರ್ವಜನಿಕರು ತೆರೆದ ವಾಹನದಲ್ಲಿ 20 ಕಿ. ಲೋ ಮೀಟರ್ ಗೂ ಹೆಚ್ಚು ಮೆರವಣಿಗೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಿದ್ದಾರೆ.
ಚಳಿಗಾಲದಲ್ಲೇ ಏಕೆ ಜಾಸ್ತಿ ಸೆಕ್ಸ್ ಮಾಡಬೇಕು ಅನಿಸುತ್ತೆ ಗೊತ್ತಾ..? ಇದಕ್ಕೆ ಕಾರಣ ಇಲ್ಲಿದೆ ನೋಡಿ
ಶಿರಾಳಕೊಪ್ಪದ ಖಾಸಗಿ ಬಸ್ ನಿಲ್ದಾಣದಿಂದ ಶುರುವಾದ ಮೆರವಣಿಗೆ ಅಡಗಂಟಿಯ ವರೆಗೆ ನಡೆದಿದೆ ರಸ್ತೆ ಉದ್ದಕ್ಕೂ ವಿದ್ಯಾರ್ಥಿಗಳು ಸಾರ್ವಜನಿಕರು ದೇಶ ಸೇವೆ ಸಲ್ಲಿಸಿ ಮರಳಿದ ಯೋಧನಿಗೆ ಹೂಮಳೆ ಸುರಿದು ಸ್ವಾಗಸಿದ್ದಾರೆ.ಯೋಧ ಪ್ರವೀಣ್ ಅಡಗಂಟಿ ಸೇನೆಯಲ್ಲಿ 47 ಮೆಡಲ್ ಗಳನ್ನು ಪಡೆದಿದ್ದಾರೆ.ಇವರಿಗೆ ಸ್ವಾಗತ ಕೋರಿದ ರೀತಿ ಸೇನೆಗೆ ಸೇರುವ ಯುವಕರಿಗೆ ಪ್ರೇರಣೆಯಾಗಲಿದೆ.