ಚಾಮರಾಜಗರ : ವೈದ್ಯರ ನಿರ್ಲಕ್ಷ್ಯದಿಂದ ಆರು ತಿಂಗಳ ಗಂಡು ಮಗು ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಚಾಮರಾಜಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಶೋಭಾ ಹಾಗೂ ಹಂಗಳ ಗ್ರಾಮದ ಆನಂದ್ ಎಂಬುವವರ ಆರು ತಿಂಗಳ ಮಗು ಸಾವನ್ನಪ್ಪಿದ್ದಾನೆ. ವೈದ್ಯರ ನಿರ್ಲಕ್ಷ್ಯಕ್ಕೆ ಅರು ತಿಂಗಳ ಗಂಡು ಮಗು ಮೃತಪಟ್ಟಿದೆ.
ಗುಂಡ್ಲುಪೇಟೆ ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಶೋಭ ಎಂಬುವವರು ಹಂಗಳ ಗ್ರಾಮದ ಆನಂದ್ ಎಂಬುವವರನ್ನು ಮದುವೆಯಾಗಿದ್ದು ಈ ಜೋಡಿಗೆ ಆರು ತಿಂಗಳ ಮುದ್ದಾದ ಗಂಡು ಮಗು ಇತ್ತು. ಶೋಭ ಬಾಣಂತಿಯಾದ್ದರಿಂದ ತಾಯಿ ಮನೆಯಲ್ಲಿದ್ದರು. ಮಗುವಿಗೆ ಆರು ತಿಂಗಳಾದ ಕಾರಣ ಕಿವಿ ಚುಚ್ಚಿಸಲು ಶೋಭ ತಾಯಿ ಜೊತೆ ಬೊಮ್ಮಲಾಪುರ ಸರ್ಕಾರಿ ಅಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆಯಲ್ಲಿ ವೈದ್ಯ ನಾಗರಾಜು ಮಗುವಿನ ಎರಡು ಕಿವಿಗೆ ಅನಸ್ತೇಸಿಯಾ ಚುಚ್ಚುಮದ್ದು ನೀಡಿದ್ದಾರೆ.ಈ ವೇಳೆ ಮಗು ಏಕಾಏಕಿ ಬಾಯಲ್ಲಿ ನೊರೆ ತುಂಬಿಕೊಂಡು ವಾಂತಿ ಮಾಡಿದೆ. ತಕ್ಷಣ ಮಗು ಸಾವನ್ನಪ್ಪಿದೆ ಎಂದು ಮಗುವಿನ ತಾಯಿ ಶೋಭ ಆರೋಪಿಸಿದ್ದಾರೆ. ಈ ವೇಳೆ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಗು ಮೃತಪಟ್ಟಿದೆ.ವಿಚಾರ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.