ಒಡಿಶಾ: ಜಗತ್ತಿನಲ್ಲಿ ಎಂಥೆತಾ ಜನ ಇರ್ತಾರೆ ನೋಡಿ. ಒಂಬತ್ತು ತಿಂಗಳು ತನ್ನ ಮಡಿಲಲ್ಲಿ ಹೆತ್ತು ಹೊತ್ತು ಸಾಕಿದ ತಾಯಿಯ ಜೀವವನ್ನೇ ಈ ಪಾಪಿ ಮಗ ಬಲಿ ಪಡೆದಿದ್ದಾನೆ. ಇದಕ್ಕೆ ಕಾರಣ ಕೇವಲ ಅಕ್ಕಿ.. ಹೌದು ಅಕ್ಕಿ ಕೊಡಲು ನಿರಾಕರಿಸಿದ್ದಕ್ಕೆ ತಾಯಿಯನ್ನೇ ವ್ಯಕ್ತಿಯೊಬ್ಬ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಬಲಿಯಾದ ರಾಯ್ಬರಿ ಸಿಂಗ್ ಮೇಲೆ ಆಕೆಯ ಮಗ ರೋಹಿದಾಸ್ ಸಿಂಗ್ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಗಾಯಗೊಂಡು ಅತಿಯಾದ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರೋಹಿದಾಸ್ ಮತ್ತು ಅವರ ಸಹೋದರ ಲಕ್ಷ್ಮೀಕಾಂತ್ ಸಿಂಗ್ ನಡುವೆ ವಿವಾದ ನಡೆಯುತ್ತಿತ್ತು. 10 ಕೆಜಿಯಷ್ಟು ಅಕ್ಕಿಗಾಗಿ ರೋಹಿದಾಸ್ ತನ್ನ ತಾಯಿಯೊಂದಿಗೆ ಘರ್ಷಣೆ ಮಾಡಿದಾಗ ವಾದವು ಹಿಂಸಾಚಾರಕ್ಕೆ ತಿರುಗಿತು ಎಂದು ವರದಿಯಾಗಿದೆ. ದಾಳಿಯ ನಂತರ, ರೋಹಿದಾಸ್ ಅದೇ ಆಯುಧದಿಂದ ತನ್ನ ಕತ್ತು ಸೀಳಿಕೊಂಡು ಸಾಯಲು ಪ್ರಯತ್ನಿಸಿದ್ದ.
Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲು-ಚರ್ಮದ ಆರೋಗ್ಯಕ್ಕೂ ಬೇಕು!
ಅವರನ್ನು ಪಿಆರ್ಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಘಟನೆ ವೇಳೆ ದಿನಗೂಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಕಾಂತ್ ಮನೆಗೆ ಹಿಂತಿರುಗಿ ಘಟನಾ ಸ್ಥಳವನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆರೋಪಿಯು ತನ್ನ ತಾಯಿಗೆ 10 ಕೆಜಿಯಷ್ಟು ಅಕ್ಕಿ ಕೇಳಿದ್ದ, ಆಕೆ ನಿರಾಕರಿಸಿದಾಗ, ಅವನು ಕೊಡಲಿಯಿಂದ ಹಲ್ಲೆ ಮಾಡಿದ್ದ ಮತ್ತು ನಂತರ ಹರಿತವಾದ ಆಯುಧದಿಂದ ತನ್ನನ್ನು ತಾನೇ ಹಾನಿ ಮಾಡಿಕೊಳ್ಳಲು ಪ್ರಯತ್ನಿಸಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.