ಆತ ರಿಯಲ್ ಎಸ್ಟೇ ಟ್ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡಿ ಬಂದ ಕಮಿಷನ್ ಹಣದಲ್ಲಿ ಬಿಂದಾಸ್ ಜೀವನಕಟ್ಟಿಕೊಂಡಿದ್ದ. ಜೊತೆಗೆ ಸ್ನೇಹಿತ ಅಂತ ವ್ಯಾಪಾರದ ಜೊತೆಗೆ ಮನೆಯಲ್ಲು ಜಾಗ ನೀಡಿದ್ದು ಕಷ್ಟಾ ಅಂದಾಗ ಹಣಕಾಸಿನ ನೆರವು ಸಹ ನೀಡಿದ್ದ. ಆದ್ರೆ ಅದೇ ಹಣಕಾಸಿನ ನೆರವೆ ಇದೀಗ ಆತನಿಗೆ ಮುಳುವಾಗಿದ್ದು ಸ್ನೇಹಿತ ಅಂತ ನಂಬಿದಕ್ಕೆ ಪರಲೋಕಕ್ಕೆ ಪಾರ್ಸಲ್ ಆಗಿಬಿಟ್ಟಿದ್ದಾನೆ.
ಬಡಾವಣೆಯ ಮಣ್ಣಿನಲ್ಲಿ ಖಾಕಿ ಇಂಚಿಂಚೂ ಶೋಧ ಕಾರ್ಯ ನಡೆಸುತ್ತಿದ್ರೆ ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದ್ದು ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡ್ತಿದ್ದವರಿಗೆ ಕಾಣಿಸಿದ್ದು ಎರಡು ತಿಂಗಳಿಂದೆ ಕೊಳೆತು ಅರೆ ಬರೆ ಬೆಂದಿರುವ ವ್ಯಕ್ತಿಯ ಮೃತದೇಹದ ಅಂಗಾಂಗಗಳು. ಅಷ್ಟಕ್ಕೂ ಇಲ್ಲಿ ಈ ರೀತಿ ಕ್ರೂರವಾಗಿ ಕೊಲೆಯಾಗಿರುವುದು ಇವರೆ ಹೆಸರು ದೇವರಾಜ್.
ಹೌದು ಅಂದಹಾಗೆ ಜೊತೆಯಲ್ಲಿ ತಿಂದು ಕುಡಿದು ಕಷ್ಟಾ ಸುಖಕ್ಕೆ ಅಂತ ಕೇಳಿದಾಗಲೆಲ್ಲ ಲಕ್ಷ ಲಕ್ಷ ಹಣ ಕೊಟ್ಟಿದ್ದ ಸ್ನೇಹಿತನಿಗೆ ಸಿನಿಮೀಯ ರೀತಿಯಲ್ಲಿ ಚಟ್ಟ ಕಟ್ಟಿರುವ ಕಥೇ ಇದು. ಹೌದು ಅಂದಹಾಗೆ ಇಲ್ಲಿ ಪೊಲೀಸರ ಮುಂದೆ ಮಾಡಿರುವ ಘನಂದಾರಿ ಕೆಲಸವನ್ನು ತೋರಿಸುತ್ತಿರುವ ಇವರ ಹೆಸರು ರಾಜ್ ಕುಮಾರ್ ಮತ್ತು ಅನಿಲ್. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ನಿವಾಸಿಯಾದ ರಾಜ್ ಕುಮಾರ್ ಅನ್ನೋ ಇವನು ಪಕ್ಕದ ಗ್ರಾಮದ ದೇವರಾಜ್ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳನ್ನ ದೆಹಲಿಯಿಂದ ತಂದು ಇಲ್ಲಿ ಮಾರಾಟ ಮಾಡುವ ಕೆಲಸ ಮಾಡ್ತಿದ್ದ.
ನಿಮಗೆ ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗುವ ಅಭ್ಯಾಸವಿದೆಯೇ..? ತುಂಬಾ ಡೇಂಜರ್ ಇದು!
ಕಳೆದ ಕೆಲ ವರ್ಷಗಳಿಂದ ಇಬ್ಬರು ಜೊತೆಯಾಗೆ ವ್ಯವಹಾರ ಮಾಡ್ತಿದ್ದ ಕಾರಣ ಲಕ್ಷ ಲಕ್ಷ ಹಣವನ್ನ ನೀಡಿದ್ದು ಅಂತರಾಜ್ಯ ವಾಹನಗಳನ್ನ ತಂದು ಮಾರಾಟ ಮಾಡಿ ಬಂದ ಲಾಭದ ಹಣವನ್ನ ಹಂಚಿಕೊಳ್ತಿದ್ದರಂತೆ. ಹೀಗಾಗೆ ನಂಬಿಕೆ ಮೇಲೆ ಲಕ್ಷ ಲಕ್ಷ ಹಣವನ್ನ ದೇವರಾಜ್ ಸ್ನೇಹಿತ ರಾಜ್ ಕುಮಾರ್ ಗೆ ನೀಡಿದ್ದು ಇತ್ತೀಚೆಗೆ ಕೆಲ ತಿಂಗಳುಗಳಿಂದ ಕೊಟ್ಟ ಹಣವನ್ನ ವಾಪಸ್ ಕೇಳ್ತಿದ್ನಂತೆ. ಹೀಗಾಗೆ ಪದೇ ಪದೇ ಹಣ ಕೇಳ್ತಿದ್ದಕ್ಕೆ ರೊಚಿಗೆದ್ದ ರಾಜ್ ಕುಮಾರ್ ಸ್ನೇಹಿತ ದೇವರಾಜ್ ನನ್ನೆ ಕೊಲೆ ಮಾಡುವ ಸ್ಕೇಚ್ ಹಾಕಿದ್ದಾನೆ.
ಅಲ್ಲದೆ ಅದಕ್ಕಾಗಿ ಆಂದ್ರ ಮೂಲದ ಅನಿಲ್ ಅನ್ನೂ ಸ್ನೇಹಿತನನ್ನ ಕರೆಸಿಕೊಂಡಿದ್ದು ಯುಪಿ ರಿಜಿಸ್ಟರ್ ಮೂಲದ ಕಾರಿನಲ್ಲಿ ಅಕ್ಟೋಬರ್ 17 ರಂದು ಹಣ ನೀಡೋದಾಗಿ ಕರೆದೋಗಿದ್ದಾನೆ. ಈ ವೇಳೆ ಸ್ನೇಹಿತನ ಸಂಚು ತಿಳಿಯದೆ ಕಾರು ಹತ್ತಿದ ದೇವರಾಜ್ ನನ್ನ ನಿರ್ಜನ ಪ್ರದೇಶಕ್ಕೆ ಕರೆದೋಗಿದ್ದು ಕಾರಿನಲ್ಲಿ ಮುಂದೆ ಕುಳಿತಿದ್ದ ದೇವರಾಜ್ ಗೆ ಹಿಂದೆಯಿದ್ದ ಅನಿಲ್ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ.
ದೇವರಾಜ್ ನನ್ನ ಕೊಲೆ ಮಾಡುವ ಮುನ್ನವೆ ಖಾಸಗಿ ಬಡಾವಣೆಯಲ್ಲಿ ಸಂಪು ಕಟ್ಟಬೇಕು ಅಂತ ಜೆಸಿಬಿ ಮೂಲಕ ಗುಂಡಿ ಹಗೆಸಿದ್ದು ದೇವರಾಜ್ ಮೃತ ದೇಹವನ್ನ ಗುಂಡಿಗೆ ಹಾಕಿ ಮಣ್ಣು ಮುಚ್ವಿದ್ದಾರೆ. ಜೊತೆಗೆ ಕೊಲೆ ಮಾಡಿದ ನಂತರ ಮೂರು ದಿನಗಳ ಬಳಿಕ ಕೊಲೆ ಮಾಡಿದ ದೇವರಾಜ್ ಕುಟುಂಬಸ್ಥರ ಜೊತೆಗೂಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವರಾಜ್ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ.
ಹೀಗಾಗಿ ಎಲ್ಲಾ ಅಯಾಮದಲ್ಲು ತನಿಖೆ ನಡೆಸಿದ ಇನ್ಸಪೇಕ್ಟರ್ ಸಾಧಿಕ್ ಪಾಷಗೆ ಮೊದಲಿಗೆ ನಾಪತ್ತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗೆ ಬೇರೆ ಆಯಾಮಾದಲ್ಲಿ ತನಿಖೆಗಿಳಿದ ಪೊಲೀಸರಿಗೆ ರಾಜ್ ಕುಮಾರ್ ಮೇಲೆ ಅನುಮಾನ ಮೂಡಿದ್ದು ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 20 ಲಕ್ಷ ಸಾಲ ನೀಡಿದ್ದ ಹಣಕ್ಕಾಗಿ ದೇವರಾಜ್ ಪದೇ ಪದೆ ಕೇಳ್ತಿದ್ದ ಕಾರಣ ಸ್ನೇಹಿತ ಅನಿಲ್ ಜೊತೆಗೂಡಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಅಲ್ಲದೆ ಕೊಲೆ ನಂತರ ಹೂತಿದ್ದ ಹೆಣ ಸಿಗಬಾರದು ಅಂತ ತಿಂಗಳ ಬಳಿಕ ಅದನ್ನ ತೆಗೆದು ಪೆಟ್ರೋಲ್ ಹಾಕಿ ಸುಟ್ಟಿದ್ದು ಸುಟ್ಟ ನಂತರ ಬೂದಿ ಸಮೇತ ಕೆರೆಗೆ ಹಾಕಿದ್ದಾಗಿ ಹೇಳಿದ್ದು ಕೆರೆಗೆ ಹಾಕಿದ್ದ ಮೃತದೇಹದ ಮೂಳೆಗಳನ್ನ ಹೊರ ತೆಗೆದಿದ್ದು ದೃಶ್ಯಂ ಸ್ಟೈಲ್ ನಲ್ಲಿ ಕಥೆ ಕಟ್ಟಲು ಮುಂದಾಗಿದ್ದವನು ಅಂದರ್ ಆಗಿದ್ದಾರೆ. ಒಟ್ಟಾರೆ ಸ್ನೇಹಿತ ಅಂತ ಸಲುಗೆ ನೀಡಿ ಆರ್ಥಿಕ ಸಹಾಯ ಮಾಡಿದಕ್ಕೆ ನಂಬಿದ್ದ ಸ್ನೇಹಿತನನ್ನೆ ಕೊಲೆ ಮಾಡಿದ್ದು ಮಾತ್ರ ನಿಜಕ್ಕೂ ದುರಂತ. ಇನ್ನೂ ಕೊಲೆ ನಂತರ ಆರೋಪಿ ಚಾಪೆ ಕೆಳಗಡೆ ನುಗ್ಗಲು ಯತ್ನಿಸಿದ್ರೆ ಪೊಲೀಸರು ರಂಗೋಲಿ ಕೆಳಗಡೆ ನುಗ್ಗುವ ಮೂಲಕ ಆರೋಪಿಗಳ ಪ್ಲಾನ್ ಉಲ್ಟಾ ಹೊಡೆಸಿದ್ದಾರೆ..
ಮಂಜು ತಿರುಮಗೊಂಡನಹಳ್ಳಿ ದೊಡ್ಡಬಳ್ಳಾಪುರ