ಈ ದೋಸೆಯನ್ನು ಮಾಡಲು ಹೆಚ್ಚು ಸಮಯದ ಅಗತ್ಯ ಕೂಡ ಇಲ್ಲ. ಅಲ್ಲದೇ ನಿಮಗೆ ಇದು ಇಷ್ಟ ಅನಿಸಿದರೆ ಅದನ್ನು ನೀವು ಹೆಚ್ಚು ಖಾರದ ಚಟ್ನಿ ಜೊತೆ ಸೇವನೆ ಮಾಡಬೇಕು. ಅಲ್ಲದೇ ಮನೆಯಲ್ಲಿ ಸಿಗುವ ಸುಲಭ ಪದಾರ್ಥಗಳಿಂದ ಇದನ್ನು ಸಲಭ ರೀತಿಯಲ್ಲೇ ಮಾಡಬಹುದು!
ಹೋಟೆಲ್ ಶೈಲಿಯ ಸೆಟ್ ದೋಸೆ ಮಾಡಲು ಯಾವ ಪದಾರ್ಥಗಳು ಬೇಕು?
- ಅಕ್ಕಿ – 200 ಗ್ರಾಂ
- ಅವಲಕ್ಕಿ – ಅರ್ಧ ಕಪ್
- ಉದ್ದು – 2 ಟೀಸ್ಪೂನ್
- ಮೆಂತ್ಯ – 1 ಟೀಸ್ಪೂನ್
- ಅಡಿಗೆ ಸೋಡಾ – ಕಾಲು ಟೀಚಮಚ
- ಸಕ್ಕರೆ – ಕಾಲು ಟೀಚಮಚ
- ನೀರು
- ಉಪ್ಪು
- ತುಪ್ಪ
ಸೆಟ್ ದೋಸೆ ಮಾಡುವ ಪಾಕವಿಧಾನ
ಒಂದು ಬಟ್ಟಲಿನಲ್ಲಿ ಅಕ್ಕಿ, ಬೇಳೆ ಮತ್ತು ಮೆಂತ್ಯ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನೀವು ಅಕ್ಕಿ ಬದಲಿಗೆ ರವೆಯನ್ನೂ ಬಳಸಬಹುದು. ಅವುಗಳಿಂದ ನೀರು ತೆಗೆದು ಬದಿಗೆ ಇಡಿ. ಈಗ ಇನ್ನೊಂದು ಬಟ್ಟಲಿನಲ್ಲಿ ಅವಲಕ್ಕಿ ತೆಗೆದುಕೊಂಡು ಎರಡು ಬಾರಿ ನೀರಿನಿಂದ ತೊಳೆಯಿರಿ. ಈಗ ಅಕ್ಕಿ, ಬೇಳೆ, ಮೆಂತ್ಯ, ಅವಲಕ್ಕಿ ಸೇರಿಸಿ ಮತ್ತು ನೀರು ಹಾಕಿ. 5 ಗಂಟೆಗಳ ಕಾಲ ಅವುಗಳನ್ನು ನೆನೆಯಲು ಬಿಡಿ.
ಇವು ಚೆನ್ನಾಗಿ ನೆನೆಸಿದ ನಂತರ ನೀರನ್ನು ಸೋಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅವುಗಳನ್ನು ಸಂಪೂರ್ಣವಾಗಿ ಮೃದುವಾಗಿ ಮತ್ತು ದೋಸೆ ಹಿಟ್ಟಿನಂತೆ ಸಿದ್ಧಗೊಳಿಸಿ. ಅಗತ್ಯವಿರುವಂತೆ ನೀರು ಸೇರಿಸಿ.
ತಯಾರಾದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಈ ಹಿಟ್ಟಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಹಿಟ್ಟನ್ನು 8 ಗಂಟೆಗಳ ಕಾಲ ಹುದುಗಲು ಬಿಡಿ. ಹಿಟ್ಟು ಹುಳಿಯಾಗಲು ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ದಪ್ಪವಾಗಿದ್ದರೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೊದಲು ಒಲೆ ಮೇಲೆ ದೋಸೆ ತವಾವನ್ನು ಬಿಸಿ ಮಾಡಿ. ಸ್ವಲ್ಪ ತುಪ್ಪ ಹಾಕಿ.. ಹಿಟ್ಟನ್ನು ಒಮ್ಮೆ ಚೆನ್ನಾಗಿ ಕಲಸಿ ಬಳಿಕ ದೋಸೆ ಹಿಟ್ಟನ್ನು ಪ್ಯಾನ್ ಮೇಲೆ ಹಾಕಿ. ಈ ಹಿಟ್ಟಿಗೆ ನೀವು ಕ್ಯಾರೆಟ್, ಹಸಿರು ಮೆಣಸು, ಈರುಳ್ಳಿ ಹೆಚ್ಚಿಕೊಂಡು ಹಾಕಬಹುದು. ಇದರಿಂದ ದೋಸೆಯ ರುಚಿ ಹೆಚ್ಚುತ್ತದೆ. ಹೀಗೆ ದೋಸೆಯ ಬಂದು ಭಾಗವನ್ನು ಮಾತ್ರ ಬೇಯಿಸಬಹುದು. ಆದರೆ ದೋಸೆ ಹೆಚ್ಚು ಕ್ರಿಸ್ಪಿಯಾಗಬೇಕು ಅಂತಾದರೆ ಎರಡೂ ಬದಿಗಳಲ್ಲೂ ಗೋಲ್ಡನ್ ಕಲರ್ ಬರುವವರೆಗೂ ಕಾಯಿಸಬಹುದು. ಇಷ್ಟಾದರೆ ನಿಮ್ಮ ಮುಂದೆ ಉಡುಪಿ ಶೈಲಿಯ ಸೆಟ್ ದೋಸೆ ರೆಡಿ