ಹಾವೇರಿ-ಗದಗ ಲೋಕಸಭಾ ಚುನಾವಣಾ ಅಖಾಡ ದಿನೇ ದಿನೇ ರಂಗೇರ್ತಾ ಇದೆ. ಹಾವೇರಿ ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಕೂಡಾ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಮಾಡೋ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ರು. ತೆರೆದ ವಾಹನದಲ್ಲಿ ತೆರಳಿ ಮತಯಾಚನೆ ಮಾಡಿದ್ರು.
ಆನಂದಸ್ವಾಮಿ ಗಡ್ಡದೇವರಮಠ ರೋಡ್ ಶೋ ಮಾಡುವ ಮೊದಲು ಮಹಿಳೆಯರಿಂದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಮಹಿಳೆಯರು ಪಾದಪೂಜೆ ಮಾಡಿದರು. ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪಾದಪೂಜೆ ಮಾಡಿ ಮಹಿಳೆಯರು ಚುನಾವಣೆಯಲ್ಲಿ ಗೆದ್ದುಬರುವಂತೆ ಹಾರೈಸಿದರು. ರೋಡ್ ಶೋಗೆ ರೋಣ ಶಾಸಕ ಜಿಎಸ್ ಪಾಟೀಲ ಸಾಥ್ ನೀಡಿದ್ರು.