ಬೆಂಗಳೂರು:- ಪ್ರತಿ ವರ್ಷದಂತೆ ಈ ವರ್ಷವೂ ಕಡಲೆಕಾಯಿ ಪರಿಷೆ ಬಸವನಗುಡಿಯಲ್ಲಿ ಆಯೋಜನೆ ಮಾಡಲಾಗಿದ್ದು, ಇದು ಒಂದು ಕಡೆ ಸಿಟಿ ಮಂದಿಗೆ ಖುಷಿ ಕೊಟ್ರೆ, ಬಸವನಗುಡಿ ನೀವಾಸಿಗಳಿಗೆ ತೀವ್ರ ಸಂಕಷ್ಟಪಡುವಂತಾಗಿದೆ.
ಸಿಟಿ ಜನ ಏನೋ ಪರಿಷೆ ಏಂಜಾಯ್ ಮಾಡ್ತಾರೆ, ಆದರೆ ಬಸವನಗುಡಿ ನಿವಾಸಿಗಳು ಮಾತ್ರ ಸಿಕ್ಕಾಪಟ್ಟೆ ತೊಂದರೆ ಅನುಭವಿಸ್ತಿದ್ದಾರೆ. ದಯವಿಟ್ಟು ಪರಿಷೆ ಮಾಡಿ, ಆದರೆ ಮೂರೇ ದಿನಕ್ಕೆ ಪರಿಷೆ ಸೀಮಿತಗೊಳಿಸಿ ಅಂತ ಇದೀಗ ಹೆರಿಟೇಜ್ ಬಸವನಗುಡಿ ರೆಸಿಡೆಂಟ್ಸ್ ವೆಲ್ಫೇರ್ ಫೋರಂ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸೋಮವಾರ ನಡೆಯುವ ಕಡ್ಲೆಕಾಯಿ ಪರಿಷೆ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಪರಿಷೆಗೆ ಲಕ್ಷಾಂತರ ಜನ ಸೇರ್ತಾರೆ. ಕಡ್ಲೆಕಾಯಿ ಮಾರಾಟ ಮಾಡಲು ಬೇರೆ ಊರು, ಜಿಲ್ಲೆಗಳಿಂದ ವ್ಯಾಪಾರಿಗಳು ಬಂದು ಬಸವನಗುಡಿಯಲ್ಲಿ ಬಿಡಾರ ಹೂಡ್ತಾರೆ. ಆದರೆ ಈ ವ್ಯಾಪಾರಿಗಳಿಗೆ ಯಾವ ಕನಿಷ್ಠ ಸೌಲಭ್ಯವನ್ನು ಕಲ್ಪಿಸಲಾಗುವುದಿಲ್ಲ. ಹೋಗಲಿ, ಅವರ ಶೌಚಕ್ಕೆ ಶೌಚಾಲಯ ಕೂಡ ಇರೋಲ್ಲ. ಹೀಗಾಗಿ ಅವರೆಲ್ಲಾ ಮನೆ ಮುಂದೆ, ರಸ್ತೆ ಗಲ್ಲಿಗಳಲ್ಲಿ ಬಹಿರ್ದೆಸೆ ಮುಗಿಸಿಕೊಳ್ತಾರೆ. ರಾಶಿ ರಾಶಿ ಕಸ, ಗಲೀಜಿನಿಂದ ಬಸವನಗುಡಿಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದೆ. ಮಕ್ಕಳು ಸೇರಿ ಹಿರಿಯ ನಾಗರಿಕರು ಹುಷಾರ್ ಇಲ್ಲದೆ ಹಾಸಿಗೆ ಹಿಡಿದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.