ಬೆಂಗಳೂರು: ಹೊಸ ವರ್ಷದ (New Year) ಹೊಸ್ತಿಲಲ್ಲಿ ಮದ್ಯಪ್ರಿಯರಿಗೆ ಶಾಕ್ ಎದುರಾಗಿದೆ. ನ್ಯೂ ಇಯರ್ ಜೋಶ್ ನಲ್ಲಿದ್ದವರಿಗೆ ಖುದ್ದು ಮದ್ಯದ ಕಂಪನಿಗಳೇ (Liquor Company) ರಿವರ್ಸ್ ಕಿಕ್ ಕೊಡಲು ರೆಡಿಯಾಗಿದೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ (Congress Government Guarantee) ಗುಂಗಲ್ಲಿದ್ದ ಜನರಿಗೆ ಬೆಲೆ ಏರಿಕೆ ಶಾಕ್ ಬ್ಯಾಕ್ ಟು ಬ್ಯಾಕ್ ಎದುರಾಗುತ್ತಿದೆ. ದಿನನಿತ್ಯ ಬಳಕೆ ವಸ್ತುಗಳು ಈಗಾಗಲೇ ಗಗನಕ್ಕೇರಿವೆ. ಒಂದು ಕಡೆ ಸರ್ಕಾರ ಜನರ ಮೂಗಿಗೆ ತುಪ್ಪ ಸವರಿದಂತೆ, ಈ ಕಡೆ ಉಚಿತ ಭಾಗ್ಯ ಕೊಟ್ಟು ಮತ್ತೊಂದು ಕಡೆ ದರ ಏರಿಸಿ ಹೊರೆಯನ್ನು ಜನರ ಮೇಲೆಯೇ ಹಾಕುತ್ತಿದೆ
ಸರ್ಕಾರದ ಖಜಾನೆಗೆ ಬೂಸ್ಟರ್ ಡೋಸ್ ಕೊಟ್ಟಿದ್ದ ಮದ್ಯಪ್ರಿಯರಿಗೆ ಇದೀಗ ಮತ್ತೊಮ್ಮೆ ರೇಟ್ ಹೈಕ್ ಬಿಸಿ ತಟ್ಟಲಿದೆ. ಆರಂಭದಲ್ಲೇ ಸರ್ಕಾರ ಆರ್ಥಿಕ ಮೂಲವಾದ ಅಬಕಾರಿ ಸುಂಕದ (Excise Duty) ದರವನ್ನು 20% ಹೆಚ್ಚಳ ಮಾಡಿತ್ತು. ಈಗ ಹೊಸ ವರ್ಷದ ಪಾರ್ಟಿ ಮೂಡ್ನಲ್ಲಿದ್ದವರಿಗೆ ಮತ್ತೆ ಮದ್ಯದ ಕಂಪನಿಗಳು ಶಾಕ್ ನೀಡುವ ಮೂಲಕ ಕಿಕ್ ಇಳಿಸಿವೆ.
ಎಷ್ಟು ದುಬಾರಿ?
ಜನವರಿ 1ರಿಂದ ಮದ್ಯ ದರ ಏರಿಕೆಗೆ ಸೂಚನೆ ನೀಡಲಾಗಿದೆ. ಹಾಲಿ ಓಟಿ 180 ಎಂಎಲ್ಗೆ 100 ರೂಪಾಯಿ ಇದ್ದು, ಜ.1 ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ.
ಜನವರಿ 1ರಿಂದ ದರ ಏರಿಕೆ ಮಾಡುವಂತೆ ಬಾರ್ (Bar) ಮಾಲೀಕರಿಗೆ ಕಂಪನಿಗಳಿಂದ ಸೂಚನೆ ನೀಡಿದೆ. ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿರುವ ಕಾರಣ ದರ ಏರಿಕೆ ಅಗತ್ಯವಾಗಿದ್ದು, ಈ ಕಾರಣ ಗ್ರಾಹಕರ ಮೇಲೆ ಹೊರೆ ಹಾಕಲೇಬೇಕಾದ ಹಿನ್ನೆಲೆ ದರ ಏರಿಕೆಗೆ ಕಂಪನಿಗಳು ನಿರ್ಧಾರ ಮಾಡಿವೆ.