ಬಿಗ್ ಬಾಸ್ ಮನೆಯ ಮನೆಯ ಸದಸ್ಯರು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ ಎರಡು ತಂಡಗಳಾಗಿ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ಕೊಂಚ ವ್ಯತ್ಯಾಸಗಳು ಕಂಡುಬಂದಿರುವುದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ.
ಈ ಹಿಂದೆ ವಿನಯ್ ಹಾಗೂ ಸಂಗೀತಾ ನೇತೃತ್ವದಲ್ಲಿ ಮನೆಯ ಸದಸ್ಯರು ಆಟವಾಡಿದ್ದರು. ಆದ್ರೆ, ಈ ಬಾರಿ ಅದೇ ತಂಡಗಳಿಗೆ ನಾಯಕರು ಬದಲಾಗಿದ್ದು, ವಿನಯ್ ಜಾಗಕ್ಕೆ ಸಿರಿ ಅವರು ಕ್ಯಾಪ್ಟನ್ ಆಗಿದ್ದಾರೆ. ತಮ್ಮ ತಂಡಕ್ಕೆ ‘ವಜ್ರಕಾಯ’ ಎಂದು ಹೆಸರಿಟ್ಟಿದ್ದಾರೆ. ಅವರ ನಂತರ ಸಂಗೀತಾ ಬದಲಿಗೆ ಪ್ರತಾಪ್ ತಮ್ಮ ತಂಡ ‘ಗಂಧದಗುಡಿ’ಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಎರಡು ಟೀಮ್ನ ಸದಸ್ಯರು ಇದೀಗ ಮುಂದಿನ ಸ್ಪರ್ಧೆಗಳಲ್ಲಿ ಜಿದ್ದಾಜಿದ್ದಿ ನಡೆಸಲು ಮುಂದಾಗಿದ್ದಾರೆ.
ಎರಡು ತಂಡಗಳು ಹೊಸ ಹೆಸರು ಪಡೆದುಕೊಳ್ಳುವುದರ ಜತೆಗೆ ಹೊಸ ನಾಯಕರನ್ನು ಪಡೆದುಕೊಂಡಿದೆ. ಈ ಮಧ್ಯೆ ಸದಾ ಮನೆಯಲ್ಲಿ ಪ್ರೀತಿಯಿಂದ ಮಾತನಾಡುತ್ತ, ಆತ್ಮೀಯತೆಯಿಂದ ಇದ್ದ ಕಾರ್ತಿಕ್ ಹಾಗೂ ಸಂಗೀತಾ ಜೋಡಿ ಸದ್ಯ ಪರಸ್ಪರ ಕೋಪದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಕೊಂಚ ಬಿರುಕು ಮೂಡಿದ್ದು, ಒಬ್ಬರ ಮಾತನ್ನು ಮತ್ತೊಬ್ಬರು ಕೇಳುವ ಪರಿಸ್ಥಿತಿಯಲಿಲ್ಲ ಎನ್ನುವಂತೆ ಇದ್ದಾರೆ.
ಇದೀಗ ‘ಗಂಧದಗುಡಿ’ ತಂಡಕ್ಕೆ ಕ್ಯಾಪ್ಟನ್ ಆದ ಪ್ರತಾಪ್ಗೆ ಮನೆಯವರ ಚಪ್ಪಾಳೆ ಸಿಕ್ಕಿದ್ದು, ಮೊದಲ ಟಾಸ್ಕ್ನಲ್ಲಿ ಗೆಲುವು ಪಡೆದಿದ್ದಾರೆ.