ಬೆಂಗಳೂರು:- ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದ ಸವಾರನನ್ನೂ ಅರೆಸ್ಟ್ ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ಚನ್ನ ಬಸವನನ್ನು ಅರೆಸ್ಟ್ ಮಾಡಲಾಗಿದೆ.
ದ್ವಿಚಕ್ರ ವಾಹನಕ್ಕೆ ಆರೋಪಿಯು, ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ಜೆಬಿ ನಗರ ಸಂಚಾರ ಪೊಲೀಸರು ವಾಹನ ವಶಪಡೆದಿದ್ದಾರೆ. ಹೋಂಡಾ ಡಿಯೋಗೆ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿತ್ತು. ಒಂದು ನಂಬರ್ ಕಾಣದಂತೆ ಆರೋಪಿ ಸ್ಟಿಕ್ಕರ್ ಅಂಟಿಸಿದ್ದ.
ಉದ್ದೇಶ ಪೂರ್ವಕವಾಗಿ ಸ್ಟಿಕ್ಕರ್ ಅಂಟಿಸಿ ಆರೋಪಿ ವಾಹನ ಓಡಿಸ್ತಿದ್ದ. ಸಂಚಾರಿ ನುಯಮ ಉಲ್ಲಂಘನೆ ಮಾಡೋದ್ರ ಜೊತೆಗೆ ದೋಷಪೂರಿತ ನಂಬರ್ ಪ್ಲೇ ಅಳವಡಿಕೆ ಮಾಡಿದ್ದ. ಈ ಬಗ್ಗೆ ಗಮನವಹಿಸಿ ವಾಹನ ಪತ್ತೆ ಮಾಡಿ ಬೈಯಪ್ಪನಹಳ್ಳಿ ಪೊಲೀಸರಿಗೆ ಜೆಬಿ ನಗರ ಸಂಚಾರ ಪೊಲೀಸರ ಟೀಂ ಮಾಹಿತಿ ನೀಡಿದೆ.
ದೂರಿನ ಅನ್ವಯ ಆರೋಪಿ ಚನ್ನಬಸವನನ್ನ ಅರೆಸ್ಟ್ ಮಾಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ವಿರುದ್ದ ಬೈಯಪ್ಪನಹಳ್ಳಿ ಠಾಣೆಯಲ್ಲಿ420ಕೇಸ್ ದಾಖಲು ಮಾಡಿದ್ದಾರೆ.