ಮಧ್ಯಪ್ರದೇಶ: ನಾಲ್ಕು ಮಕ್ಕಳನ್ನು ಹೆರುವ ಬ್ರಾಹ್ಮಣ ದಂಪತಿಗೆ 1 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರದ ಅಧೀನದ ಪರಶುರಾಮ್ ಕಲ್ಯಾಣ್ ಬೋರ್ಡ್ ಪ್ರಕಟಿಸಿದೆ. ತಮ್ಮ ಸಮುದಾಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವಂತೆ ಕರೆ ನೀಡಿದೆ.
ಭೋಪಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಪರಶುರಾಮ್ ಕಲ್ಯಾಣ್ ಬೋರ್ಡ್ ಅಧ್ಯಕ್ಷ ಪಂಡಿತ ವಿಷ್ಣು ರಾಜೌರಿಯಾ, ನಾವು ನಮ್ಮ ಕುಟುಂಬಗಳ ಬಗ್ಗೆ ಗಮನ ಹರಿಸುವುದನ್ನು ನಿಲ್ಲಿಸಿದ್ದೇವೆ. ಇತ್ತೀಚಿನ ದಂಪತಿ ಒಂದು ಮಗು ಸಾಕು ಅಂತಿದ್ದಾರೆ. ಆದರೆ ಹಿಂದೂಯೇತರರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಭವಿಷ್ಯದ ತಲೆಮಾರುಗಳನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಅದಕ್ಕೆ ಕನಿಷ್ಠ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಕರೆ ನೀಡಿದ್ದಾರೆ.
4 ಮಕ್ಕಳನ್ನು ಹೆತ್ತ ದಂಪತಿಗೆ 1 ಲಕ್ಷ ರೂ. ನೀಡುವುದಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ತನ್ನ ಹೇಳಿಕೆ ವೈರಲ್ ಆಗುತ್ತಿದ್ದಂತೆ ರಾಜೋರಿಯಾ ಅವರು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ಅಥವಾ ಸಾಮಾಜಿಕ ಬೆಂಬಲದ ಮೂಲಕ ಬಹುಮಾನದ ಹಣವನ್ನು ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಬಿಜೆಪಿ ಸರ್ಕಾರವು ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.