ಉತ್ತರ ಕರ್ನಾಟಕದ ಒಬ್ಬ ರೈತ ಭಾರತ ದೇಶದ ರೈತರಿಗೆ ಮಾದರಿಯಾಗಿದ್ದಾನೆ. ಕೃಷಿಯಲ್ಲಿ ಅದೇನು ಲಾಭವಿಲ್ಲ ಎಂದು ಮೂಗು ಮುರಿಯುವ ರೈತರಗಿ ಸ್ಥಳೀಯ ಸೂಳಂಕಿ ಪರಿವಾರದ ನಿವೃತ್ತ ಸೈನಿಕ ನಾರಾಯಣ ಹಾಗೂ ಸಹೋದರು ಇಸ್ರೇಲ್ ಮಾದರಿಯಲ್ಲಿ ಭಾರಿ ತೂಕದ ಕಬ್ಬು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ.
ಬಿಜಾಪುರ ಜಿಲ್ಲೆಯ ಗೋಳಸಂಗಿ ಗ್ರಾಮದ ನಾರಾಯಣ ಮತ್ತು ಸಹೋದರರು ಸೇರಿ 4 ಎಕರೆ 10 ಗುಂಟೆ ಗದ್ದೆಯಲ್ಲಿ ಸುಮಾರು 500 ಟನ್ ಕಬ್ಬು ಬೆಳೆಯುವ ಮೂಲಕ ಇತರ ರೈತರಿಗೆ ಉಬ್ಬಿರುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ಕಬ್ಬು ಎರಡು ಕೆಜಿ ತೂಕ ಇರುವುದು ಸಹಜ ಆದರೆ ಇವರು ಇಸ್ರೇಲ್ ಕೃಷಿ ಪದ್ಧತಿ ಬಳಸಿ 3 ರಿಂದ 4 ಕೆಜಿ ತೂಕದ 28 ರಿಂದ 32 ಗಣಿಕೆ ಇರುವ 20 ಮತ್ತು 25 ಅಡಿ ಎತ್ತರದ ಕಬ್ಬು ಬೆಳೆದು ರೈತರಲ್ಲಿ ಆಶ್ಚರ್ಯ ಮೂಡಿಸಿದ್ದಾರೆ.
ಉತ್ತರ ಪ್ರದೇಶ ಮಹಾರಾಷ್ಟ್ರ ಕರ್ನಾಟಕದ ರಾಜ್ಯಗಳಿಂದ ಹಿಗೆ ಹಲವಾರು ಕಡೆಯಿಂದ ರೈತರು ಭೇಟಿ ನೀಡಿ ಪ್ರಸಂಸೆ ವ್ಯಕ್ತಪಡಿಸಿದ್ದಾರೆ. ಉತ್ತಮವಾಗಿ ಕಬ್ಬು ಬೆಳೆಯಲು ಹೇಗೆ ಸಾಧ್ಯವಾಯಿತು? ಏನು! ಯತಾ! ಎಂಬ ಇತ್ಯಾದಿ ವಿಷಯಗಳ ಕುರಿತು ರೈತರು ಸಮಗ್ರವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ರಾಸಾಯನಿಕ ಗೊಬ್ಬರದ ವಿತರಕರು ರವೀಂದ್ರ ಗಡಾದ ಮಾತನಾಡಿ ಗೋಳಸಂಗಿ ಗ್ರಾಮ ನಾರಾಯಣ ಸಾಳಂಕಿರವರು 120 ಟನ್ ಕಬ್ಬು ಬೆಳೆದಿದ್ದು ನಮಗೆ ಸಂತೋಷವಾಗಿದೆ. ಈ ಹಿಂದೆ ಬಾಳಿ ಬೆಳೆದು ಅವಾರ್ಡ್ ತೆಗೆದುಕೊಂಡಿದ್ದು ನಾವು ನೋಡಿದ್ದೇವೆ. ಮಡ್ಡಿ ಪ್ರದೇಶದಲ್ಲಿ ಒಂದು ಎಕರೆ ಜಮೀನಿನಲ್ಲಿ 120 ತನ್ನ ಬೆಳೆದಿದ್ದು ಮತ್ತು ನಾಲ್ಕು ಎಕರೆಯಲ್ಲಿ ಸರಿಸುಮಾರು 500 ಟನ್ ಕಬ್ಬು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಒಬ್ಬ ನಿವೃತ್ತ ಸೈನಿಕನಾಗಿ ಕೃಷಿಯಲ್ಲಿ ಅಗಾಧವಾದಂತ ನಂಬಿಕೆ ಇಟ್ಟು ಕೊಂಡು ಒಂದು ಸಾಧನೆ ಮಾಡುವಲಿ ಯಶಸ್ವಿಯಾಗಿದ್ದಾರೆ ಇನ್ನು ಮುಂದು ಕೂಡ ಹೆಚ್ಚಿನ ಮಟ್ಟದಲ್ಲಿ ಇಳುವರಿಯನ್ನು ತೆಗೆದು ಇತರ ರೈತರಿಗೆ ಮಾರ್ಗದರ್ಶಕರಾಗಿ ಬೆಳೆಯಲೆಂದು ನಾವು ಹಾರೈಸುತ್ತೇವೆ.