ಬೆಂಗಳೂರು:- ಬೆಂಗಳೂರಿನ ಜೆಜೆ ನಗರದ ನಾಲ್ಕನೆ ಕ್ರಾಸ್ನಲ್ಲಿ ಪತ್ನಿ ತನ್ನನ್ನು ದೂರ ಮಾಡಿದ್ದರಿಂದ ಡಿಪ್ರೆಷನ್ಗೆ ಒಳಗಾದ ವ್ಯಕ್ತಿಯೊಬ್ಬ ಆಕೆಯ ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ.
ಪರ್ವಿನ್ ತಾಜ್ ಹಲ್ಲೆಗೀಡಾಗಿ ಮೃತಪಟ್ಟ ಮಹಿಳೆ. ಮಹಮ್ಮದ್ ಜುನೈದ್ ಎಂಬಾತನಿಂದ ಕೊಲೆ ನಡೆದಿದೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧಿಗಳಾಗಿದ್ದಾರೆ. ಜುನೈದ್ ಹಾಗೂ ಆತನ ಪತ್ನಿ ಜಗಳವಾಡಿಕೊಂಡಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಲಾಗಿತ್ತು.
ಇದಾದ ಮೇಲೆ ಜುನೈದ್ ಪತ್ನಿಯಿಂದ ದೂರಾಗಿದ್ದ. ಪತ್ನಿಯಿಂದ ದೂರವಾಗಿ ಡಿಪ್ರೆಶನ್ಗೆ ಒಳಗಾಗಿದ್ದ. ಪತ್ನಿ ದೂರವಾದುದರಿಂದ ಮಾನಸಿಕವಾಗಿ ನೊಂದಿದ್ದ. ಈ ವೇಳೆ ಆತ ಪರ್ವಿನ್ ತಾಜ್ಗೆ ಹತ್ತಿರವಾಗಿದ್ದ. ಪರ್ವಿನ್ ತಾಜ್ ಆರೋಪಿಯ ಪತ್ನಿಯ ಸಂಬಂಧಿಯಾಗಿದ್ದಳು. ಆದರೆ ಇತ್ತೀಚೆಗೆ ಪರ್ವಿನ್ ಸಹ ಜುನೈದ್ನನ್ನು ದೂರವಿಟ್ಟಿದ್ದಳು.
ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಜುನೈದ್, ಚಾಕು ಸಹಿತ ನೇರವಾಗಿ ಪರ್ವಿನ್ ಮನೆಗೆ ಹೋಗಿದ್ದ. ಪರ್ವಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪರ್ವಿನ್ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.