ಧಾರವಾಡ : ಜಿಲ್ಲೆಯ 525 ವಿಶೇಷ ಚೇತನರಿಗೆ ದಾಖಲೆಯ ತ್ರಿಚಕ್ರ ವಾಹನ ವಿತರಣೆಗೆ ಕ್ಷಣಗಣಗನೆ ಅರಂಭವಾಗಿದೆ. ಹೌದು ಕರ್ನಾಟಕ ಕಾಲೇಜು ಮೈದಾನದಲ್ಲಿ ಈಗಾಗಲೇ ವಿಶೇಷ ಚೇತನರಿಗೆ ನೀಡು ಮೊಟಾರ್ ಸೈಕಲ್ ಬಂದಿದ್ದು, ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನ ಹಾಗೂ ಉಪ ಮುಖ್ಯಂಮತ್ರಿ ಡಿಕೆಶಿ ಸಚಿವ ಸಂತೋಷ ಲಾಡ ಅವರ ನೇತೃತ್ವದಲ್ಲಿ ವಾಹನ ವಿತರಣೆಗೆ ಚಾಲನೆ ನೀಡಲಿದ್ದಾರೆ.
ಈಗಾಗಲೇ ಕಳೆದ ಶನಿವಾರದಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಯಕ್ರಮ ನಡೆಯುವ ಕೆಸಿಡಿ ಮೈದಾನಕ್ಕೆ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರವರೊಂದಿಗೆ ಭೇಟಿ ನೀಡಿ ಕಾರ್ಯಕ್ರಮದ ಸಿದ್ಧತೆ ಕುರಿತು ಪರಿಶೀಲನೆ ಕೈಗೊಂಡಿ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿಬರಾದ ಲಾಡ್ ಅವರಿಂದ ಇದು ಮತ್ತೊಂದು ಮಹೋನ್ನತ ಕಾರ್ಯಕ್ರಮವಾಗಿದ್ದು,
ಈ ಕಾರ್ಯಕ್ರಮ ಯಶಸ್ವಿಗೆ ಧಾರವಾಡ ಜಿಲ್ಲಾಡಳುತ ಕಾರ್ಮಿಕ ಇಲಾಖೆ ಹಾಗೂ ಸಂತೋಷ ಲಾಡ್ ಪೌಂಡೇಶನ ಕೂಡಾ ಸಾಥ ನಾಡಿದೆ. ಇನ್ನೂ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ 25 ತ್ರಿ ಚಕ್ರವಾಹನವು ಇದರಲ್ಲಿ ಸೇರಿದ್ದು, ಒಟ್ಟು 525 ವಿಶೇಷ ಚೇನರಿಗೆ ಇಂದು ಸಂಜೆ ವಾಹನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ಗಳನ್ನು ಸಹ ವಿತರಣೆ, ಹಾಗೆಯೇ ರಾಜ್ಯದ ಗಿಗ್ ಕಾರ್ಮಿಕರು ಹಾಗೂ ಪತ್ರಿಕಾ ವಿತರಕ ಕಾರ್ಮಿಕರ ವಿಮಾ ಯೋಜನೆಗೂ ಕೂಡಾ ಸಿಎಂ ಸಿದ್ದರಮಾಯ್ಯ ಹಾಗೂ ಡಿಸಿಎಂ ಡಿಕೆಶಿಯವರು ಚಾಲನೆ ನೀಡಲಿದ್ದಾರೆ.