ಜ.25ರಂದು ಅಂತ್ಯತ ಅಪರೂಪದ ಖಗೋಳ ಕೌತುಕವೊಂದು ಸಂಭವಿಸಲಿದೆ. ಈ ವಿಸ್ಮಯವನ್ನು ಕಣ್ಮುಂಬಿಕೊಳ್ಳಲು ವಿಜ್ಞಾನಿಗಳ ಜೊತೆಗೆ ಜಗತ್ತಿನಾದ್ಯಂತ ಹಲವರು ಕುತೂಹಲದಿಂದ ಕಾಯುತ್ತಿದ್ದಾರೆ.
ಜನವರಿ 25ರಂದು ಸಂಭವಿಸುವ ಅಪರೂಪವಾದ ಖಗೋಳ ಘಟನೆಯಲ್ಲಿ ಅಪರೂಪದ ಗ್ರಹಗಳ ಸಂಯೋಗ ನಡೆಯಲಿದೆ. ಅಂದರೆ ಆ ದಿನ ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ಸಂಚಾರ ಮಾಡಲಿದೆ.
ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿದೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪನ್ನು ಸುರಿಸಲಿದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಈ ಗ್ರಹಗಳ ಸಂಯೋಗ ನಡೆಯಲಿದ್ದು, ಇದನ್ನು ಬರಿ ಕಣ್ಣಿನಲ್ಲೇ ನೋಡಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಈ ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ. ಈ ರಚನೆಯು ಆಕಾಶದಲ್ಲಿ ಗ್ರಹಗಳು ನರ್ತಿಸುವಂತೆ ಕಾಣುತ್ತದೆ.