ಸಂಗೀತ ಮಾಂತ್ರಿಕ ಎಆರ್ ರೆಹಮಾನ್, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ನೀಡಿದ್ದಾರೆ. 29 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಜೋಡಿ ಏಕಾಏಕಿ ಡಿವೋರ್ಸ್ ಘೋಷಿಸುವ ಮೂಲಕ ಪ್ರತಿಯೊಬ್ಬರಿಗೂ ಶಾಕ್ ನೀಡಿದ್ದರು. ಸೈರಾ ಬಾನು ಡಿವೋರ್ಸ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರೆಹಮಾನ್ ಬ್ಯಾಂಡ್ನಲ್ಲಿದ್ದ ಮೋಹಿನಿ ಡೇ ಅವರು ಪತಿ ಮಾರ್ಕ್ ಜೊತೆ ವಿಚ್ಛೇದನ ಪಡೆದಿದ್ದರು. ಈ ಎರಡೂ ವಿಚ್ಛೇದನವನ್ನು ಲಿಂಕ್ ಮಾಡಿ ರೆಹಮಾನ್ ವಿಚ್ಛೇದನಕ್ಕೆ ಮೋಹಿನಿ ಕಾರಣ ಎಂದು ಸಾಕಷ್ಟು ಸುದ್ದಿ ಸೋಶಿಯಲ್ ಮೀಡಿಯಾಗಳ್ಲಿ ಹಬ್ಬಿತ್ತು. ಇದೀಗ ಈ ಊಹಾಪೋಹಗಳಿಗೆ ಮೋಹಿನಿ ತೆರೆ ಎಳೆದಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮೋಹಿನಿ ಡೇ, ವಿಡಿಯೋದಲ್ಲಿ ಎ ಆರ್ ರೆಹಮಾನ್ ಅವರ ಜೊತೆಗಿನ ತನ್ನ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. “ನಾನು ರೆಹಮಾನ್ ಅವರ ಜೊತೆ ಬಾಲ್ಯದಿಂದ ಎಂಟೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅಷ್ಟೇ ಅಲ್ಲದೇ ಅವರು ನನ್ನ ತಂದೆಯ ಸಮಾನ. ರೆಹಮಾನ್ ಅವರಿಗೆ ನನ್ನ ವಯಸ್ಸಿನ ಹೆಣ್ಣು ಮಕ್ಕಳಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಬೇಡಿ, ನಮ್ಮ ಗೌಪ್ಯತೆಯನ್ನು ಗೌರವಿಸಿ” ಎಂದಿದ್ದಾರೆ.
dey_bass ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಹಂಚಿಕೊಂಡ ಕೇವಲ 17 ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.