ಬೆಂಗಳೂರು ಗ್ರಾಮಾಂತರ: ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಘಟನೆ ರಾಜ್ಯ ಗಡಿಭಾಗ ತಮಿಳುನಾಡಿನ ಸಿಪ್ಕಾಟ್ ಬಳಿಯ ಬೇಗಿಪಲ್ಲಿಯಲ್ಲಿ ರಾಜ್ಯ ಗಡಿಭಾಗ ತಮಿಳುನಾಡಿನ ಸಿಪ್ಕಾಟ್ ಬಳಿಯ ಬೇಗಿಪಲ್ಲಿಯಲ್ಲಿ ನಡೆದಿದೆ.
ಕಾಂಗ್ರೆಸ್ʼನಲ್ಲಿ ಮತ್ತೆ ಜೋರಾಯ್ತು ಡಿಸಿಎಂ ಕೂಗು: ಸಂಕ್ರಾಂತಿ ಹಬ್ಬಕ್ಕೂ ಮೊದಲೇ ಬ್ಲ್ಯಾಸ್ಟ್ ಆಗುತ್ತಾ ಫೈಟ್!
ಬೇಗಿಪಲ್ಲಿಯ ನಿವಾಸಿ ತಿಮ್ಮರಾಜು (36) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆತನನ್ನು ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋದ ವೇಳೆ ತಪ್ಪಿಸಿಕೊಳ್ಳಲು ಹೋಟೆಲ್ ಒಂದರ ಒಳಗೆ ಹೋಗಿದ್ದಾನೆ. ದುಷ್ಕರ್ಮಿಗಳು ಆದರೂ ಆತನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ 25 ಬಾರಿ ಚುಚ್ಚಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ತಿಮ್ಮರಾಜು ಹತ್ಯೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಸ್ಥಳಕ್ಕೆ ಸಿಪ್ಕಾಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.