ಹುಬ್ಬಳ್ಳಿ: ಬಡ್ಡಿಕೋರರ ಅಟ್ಟಹಾಸಕ್ಕೆ ಬೇಸತ್ತು ಟ್ರಕ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಬೈಪಾಸ್ ರಸ್ತೆಯ ದಾರಾವತಿ ಹನಮಮಪ್ಪನ ದೇವಸ್ಥಾನದ ಬಳಿ ಘಟನೆ ನಡೆದಿದೆ. ಸಿದ್ದಪ್ಪ ಕೆಂಚಣ್ಣವರ(42) ಮೃತ ದುರ್ದೈವಿಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದಿರೋ ಸಿದ್ಧಪ್ಪ, ಮಹೇಶ್ ಚಿಕ್ಕವೀರಮಠ ಎಂಬಾತನ ವಿರುದ್ಧ ಬಡ್ಡಿಗಾಗಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದು, ಮಹೇಶ್ ಚಿಕ್ಕವೀರಮಠ ಗೆ ತಕ್ಕ ಶಿಕ್ಷೆ ನೀಡಬೇಕೆಂದು ಡೆತ್ ನಲ್ಲಿ ಉಲ್ಲೇಖಿಸಿದ್ದಾನೆ..
ಪತ್ನಿ, ಅತ್ತೆಯ ಶೀಲದ ಮೇಲೆ ಶಂಕೆ: ತಲ್ವಾರ್ನಿಂದ ಅಟ್ಯಾಕ್ ಮಾಡಿದ ಪಾಪಿ ಅರೆಸ್ಟ್!
ಮಹೇಶ್ ಚಿಕ್ಕವೀರಮಠನಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದು, ಸಾಲಕ್ಕಿಂತ ಹೆಚ್ಚು ಬಡ್ಡಿಯನ್ನೇ ಕಟ್ಟಿದ್ದ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಹಣ ಕಟ್ಟುವಂತೆ ಮಹೇಶ್ ಪೀಡಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾನೆ. ಸಾಲಗಾರನ ಕಿರುಕುಳು ತಾಳಲಾರದೆ ಟ್ರಕ್ ಗೆ ಬಿದ್ದು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಶಶಿಕುಮಾರ್ ಸಹ ಗೋಕುಲ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪ್ರಕರಣ ಸಂಬಂಧ ಮಾಹಿತಿ ಪಡೆದಿದ್ದಾರೆ. ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.