ಬೀಜಿಂಗ್:- ಚೀನಾದಲ್ಲಿ ಹೊಸ ವೈರಸ್ ಆರ್ಭಟ ಜೋರಾಗಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೋವಿಡ್ ತವರು ದೇಶ ಚೀನಾದಲ್ಲಿ ಹೆಚ್ಎಂಪಿವಿ ಹೆಸರಿನ ಹೊಸ ವೈರಸ್ ವಿಜೃಂಭಿಸುತ್ತಿದೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜಗತ್ತು ಮತ್ತೆ ಆತಂಕಕ್ಕೆ ಒಳಗಾಗಿದೆ.
ಹೆಚ್ಎಂಪಿವಿ ಅಂದರೆ ಹ್ಯೂಮನ್ ಮೆಟಾನ್ಯೂಮೋ ವೈರಸ್. ಇದು ಪಕ್ಷಿ, ಜಲಚರಗಳಲ್ಲಿ ಶ್ವಾಸಕೋಶ ವ್ಯಾಧಿಗಳನ್ನು ಉಂಟು ಮಾಡುವ ವೈರಸ್ ಆಗಿದೆ. ಹೆಚ್ಎಂಪಿವಿ ವೈರಸ್ ಚೀನಾಗೆ ಹೊಸದೇನು ಅಲ್ಲ. 2021ರಲ್ಲಿ ಮೊದಲ ಬಾರಿ ಮಕ್ಕಳಲ್ಲಿ ಈ ವೈರಸ್ ಅನ್ನು ಡಚ್ ಸಂಶೋಧಕರು ಪತ್ತೆ ಹಚ್ಚಿದ್ದರು. ಆದರೆ ಇದು ಹೇಗೆ ಸೋಕುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ವಿಫಲರಾಗಿದ್ದರು
ಹೆಚ್ಎಂಪಿವಿ ವೈರಸ್ ನಿಯಂತ್ರಣಕ್ಕೆ ವ್ಯಾಕ್ಸಿನ್, ಔಷಧಿ ಕಂಡು ಹಿಡಿದಿಲ್ಲ. ಶೀತ-ಕೆಮ್ಮು, ಜ್ವರ, ಸೀನುವಿಕೆ, ಮೂಗು ಸೋರುವಿಕೆ ಇದರ ಪ್ರಮುಖ ಲಕ್ಷಣ. ಇದು ನ್ಯೂಮೋನಿಯಾ, ಬ್ರಾಂಕೈಟಿಸ್ಗೆ ದಾರಿ ಮಾಡಿಕೊಡಬಹುದು.
ಸದ್ಯಕ್ಕೆ ಚೀನಾದ ಉತ್ತರ ಭಾಗದಲ್ಲಿ ಮಾತ್ರ ಕಂಡು ಬಂದಿದ್ದು ವಯಸ್ಸಿನ ಬೇಧವಿಲ್ಲದೇ ಎಲ್ಲರಿಗೂ ಈ ವೈರಸ್ ಸೋಕುತ್ತಿದೆ. ಮುಖ್ಯವಾಗಿ ಮಕ್ಕಳು, ವಯೋವೃದ್ಧರನ್ನು ಹೆಚ್ಚು ಕಾಡುತ್ತಿದೆ.
ಕೇಸ್ಗಳನ್ನು ಟ್ರೇಸ್ ಮಾಡುವುದರಲ್ಲಿ ವೈದ್ಯಕೀಯ ಸಿಬ್ಬಂದಿ ಬ್ಯುಸಿಯಾಗಿದ್ದು ಹೊಸ ವೈರಸ್ ಮಾರಣಾಂತಿಕವೇ ಎಂಬುದು ಇನ್ನೂ ಖಚಿತವಾಗಿಲ್ಲ.