ದೇವನಹಳ್ಳಿ:- ಹಿಂದೂಗಳ ಹೊಸ ವರ್ಷ ಯುಗಾದಿಯನ್ನು ಸಿಟಿ ಮಂದಿ ಸಂಭ್ರಮ-ಸಡಗರ, ಪೂಜೆ-ಪುನಸ್ಕಾರದೊಂದಿಗೆ ಬರಮಾಡಿಕೊಂಡಿದ್ದು ಯುಗಾದಿಯ ಮಾರನೇ ದಿನ ಅಂದ್ರೆ ಇಂದು ಎಲ್ಲೆಡೆ ಹೊಸತೊಡಕಿಗಾಗಿ ಸಿದ್ಧತೆ ನಡೆದಿದೆ
ಹೀಗಾಗಿ ಬೆಳ್ಳಂ ಬೆಳಗ್ಗೆಯೇ ದೇವನಹಳ್ಳಿ ಜನ ಮಾಂಸದಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಇನ್ನೂ ಎಲ್ಲರಿಗೂ ತಿಳಿದಿರುವಂತೆ ಯುಗಾದಿ ಹಬ್ಬದ ಪ್ರಯುಕ್ತ ಹೊಸತಡುಕು ಗುಡ್ಡೆ ಮಾಂಸಕ್ಕೆ ಭಾರಿ ಬೇಡಿಕೆ ಬಂದಿದೆ. ಅದರಂತೆ ಯುಗಾದಿ ಎರಡನೇ ದಿನ ಖಾರದೂಟದ ಗುಡ್ಡೆ ಮಾಂಸಕ್ಕೆ ದೇವನಹಳ್ಳಿ ತಾಲ್ಲೂಕಿನ ಯಲಿಯೂರು ಗ್ರಾಮದ ಜನತೆ ಮುಗಿ ಬಿದ್ದಿರುವ ದೃಶ್ಯ ಕಂಡು ಬಂತು.
ಇನ್ನೂ ವ್ಯಾಪಾರಿಗಳು ಇಡೀ ರಾತ್ರಿ ಮಾಂಸ ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದರು. ಯಲಿಯೂರಿನ ಡಿ.ಎನ್.ಎಫ್ ಕುರಿ ಮತ್ತು ಮೇಕೆ ಉತ್ಪಾದಕರ ಘಟಕದ ವತಿಯಿಂದ ಮಾರಾಟ ಮಾಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಿಂದ ದೇವನಹಳ್ಳಿ ಯಲಿಯೂರಿನಲ್ಲಿ ಗುಡ್ಡೆ ಮಾಂಸಕ್ಕೆ ಭಾರಿ ಬೇಡಿಕೆ ಇದೆ.
ಈ ವರ್ಷ ಒಂದೂವರೆ ಸಾವಿರ ಕೆ.ಜಿ ಮಟನ್ ಮಾರಾಟಕ್ಕೆ ಪ್ಲಾನ್ ಮಾಡಿಕೊಂಡಿದ್ದು, ಪ್ರತಿ ಕೆ.ಜಿ.ಗೆ 700 ರೂಪಾಯಿ ಯಂತೆ ಗುಡ್ಡೆ ಮಾಂಸ ಮಾರಾಟ ಮಾಡಲಾಗುತ್ತಿದೆ.
ಹಳ್ಳಿಯ ಹಳೆ ಪದ್ದತಿ ಗುಡ್ಡೆ ಮಾಂಸಕ್ಕೆ ಸಿ.ಟಿ ಜನರೆ ಹೆಚ್ಚಾಗಿ ಬರ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಹಳ್ಳಿ ಸೊಗಡಿನ ಗುಡ್ಡೆ ಮಾಂಸಕ್ಕೆ ದೇವನಹಳ್ಳಿಲಿ ಭಾರಿ ಡಿಮ್ಯಾಂಡ್ ಬಂದಿದೆ.