ಮಂಗಳೂರು: ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ ನಾವು ಎಷ್ಟೇ ಕೇರ್ ಆಗಿ ಇದ್ರೂ ಸಾಲದು ಒಂದು ಕ್ಷಣ ಮೈ ಮರೆತರೆ ಮಕ್ಕಳ ಜೀವಕ್ಕೆ ಕಂಟಕವಾಗುತ್ತದೆ ಹಾಗೆ ತಂದೆ ತಾಯಿಯೂ ಆ ನೋವಿನಂದ ಹೊರಬರದೇ ಜೀವಂತ ಶವವಾಗಿ ಬದುಕಬೇಕು .
ಹಾಗಾಗಿ ನಾವು ಸಣ್ಣ ಮಕ್ಕಳನ್ನು ಎಷ್ಟು ಕೇರ್ ಆಗಿ ನೋಡ್ಕೋಬೇಕು ಅಂದ್ರೆ ಕಣ್ಣಲ್ಲಿ ಕಣ್ಣಿಟ್ಟು ಒಂದು ಕ್ಷಣ ಮೈ ಮರೆತರೆ ಏನಾಗುತ್ತೆ ಅಂಥ ಈ ಸ್ಟೋರಿ ನೋಡಿದರೆ ಅರ್ಥ ಆಗುತ್ತೆ.
ಹೌದು… ಇಲ್ನೋಡಿ ಈ ದೃಶ್ಯ ನೋಡಿದ್ರೆ ಅರ್ಥವಾಗುತ್ತೆ ಒಂದು ಕ್ಷಣ ಮೈ ಜುಂ ಅನ್ನೋದು ಮಾತ್ರ ಗ್ಯಾರಂಟಿ. ಅಜ್ಜ ಕಾರನ್ನು ತೆಗೆಯುವಾಗ ಸಣ್ಣ ಮಗು ಬಂದಿದ್ದನ್ನು ನೋಡದೇ ಕಾರನ್ನು ತೆಗೆದಿದ್ದಾರೆ ಆದರೆ ಕಾರಿನ ಅಡಿಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಉಪ್ಪಳದ ಸೋಂಕಾಲ್ ನಲ್ಲಿ ನಡೆದಿದೆ.
ಸಣ್ಣ ಮಗು ಕಾರಿನ ಕೆಳಗೆ ಬಿದ್ದು ಅರಚಿಕೊಂಡಾಗಲೇ ದೊಡ್ಡಮಗುವೊಂದು ಓಡಿ ಹೋಡಿ ತಕ್ಷಣ ನೋಡಿದ ಆಗ ಕಾರನ್ನು ನಿಲ್ಲಿಸಿ ಮಗುವನ್ನು ಎತ್ತಿಕೊಂಡರೂ ಆದರೂ ಅದರ ಪ್ರಾಣಪಕ್ಷಿ ಮಾತ್ರ ಹಾರಿ ಹೋಗಿತ್ತು.
ಹಾಗಾಗಿ ಸಣ್ಣ ಮಕ್ಕಳು ಮನೆಯಲ್ಲಿರುವಾಗ ಎಷ್ಟು ಜಾಗೃತೆಯಿಂದ ಇರಬೇಕು ಅಂದ್ರೆ ಈ ಒಂದು ಘಟನೆಯೇ ಒಂದು ದೊಡ್ಡ ಸಾಕ್ಷಿ!