ಬೆಂಗಳೂರು: ಅದು ಬೆಂಗಳೂರಿನ ಹೃದಯಭಾಗದಲ್ಲಿರೋ ಬೃಹತ್ ಪಾರ್ಕಿಂಗ್ ಕಟ್ಟಡ.. ಕಟ್ಟಡದ ಕಾಮಗಾರಿ ಮುಗಿದು ಮೂರ್ನಾಕ್ಕು lವರ್ಷಗಳ ಬಳಿಕ ಉದ್ಘಾಟನಾ ಭಾಗ್ಯ ಕಂಡಿದೆ.. ಹೀಗೆ ಉದ್ಘಾಟನೆಗೊಂಡಿರೋ ಮಲ್ಟಿ ಲೇವಲ್ ಪಾರ್ಕಿಂಗ್ ಗೆ ವಾಹನಗಳೇ ಬರ್ತಿಲ್ಲ..ಬಿಬಿಎಂಪಿ ಕೋಟಿ ಕೋಟಿ ಖರ್ಚು ಮಾಡಿ ಮಾಡಿರೋ ಅತ್ಯಾಧುನಿಕ ಪಾರ್ಕಿಂಗ್ ಕಟ್ಟಡಕ್ಕೆ ಯಾಕೆ ವಾಹನಗಳು ಬರ್ತಿಲ್ಲ ಅಂತೀರಾ ಈ ಸ್ಟೋರಿ ನೋಡಿ..
Video Viral: ಬ್ಯಾಡ್ಮಿಂಟನ್ ಪಂದ್ಯವಾಡುವಾಗ ಖ್ಯಾತ ಆಟಗಾರ ಮೈದಾನದಲ್ಲೆ ಸಾವು: ಏನಾಯ್ತು?
ಹೌದು, ಬೆಂಗಳೂರಿನ ಕೇಂದ್ರ ಭಾಗದಲ್ಲಿರೋ ಬೃಹತ್ ಪಾರ್ಕಿಂಗ್ ಕಟ್ಟಡ ಕೊನೆಗೂ ಲೋಕಾರ್ಪಣೆಯಾಗಿ ಎರಡು ವಾರ ಕಳೆದಿದೆ.. ಸುಮಾರು ವರ್ಷಗಳ ಹಿಂದೆಯೇ ಕಾಮಗಾರಿ ಮುಗಿದಿದ್ರು ಇಲ್ಲಿ ಪಾರ್ಕಿಂಗ್ ಟೆಂಡರ್ ಪಡದುಕೊಳ್ಳಲು ಯಾರು ಮುಂದೆಬಾರದ ಕಾರಣ ಕಟ್ಟಡ ಹಾಗೇಯೆ ಇತ್ತು..ಹೇಗೋ ಕೊನೆಗೂ ಕಳೆದ ಎರಡು ವಾರಗಳಿಂದೆ ಈ ಬೃಹತ್ ಪಾರ್ಕಿಂಗ್ ಕಟ್ಟಡ ಲೋಕಾರ್ಪಣೆಯಾಗಿದೆ..
ಹಿಂದೂಗಳ ತೇಜೋವಧೆಗೆ ಸದನ ಬಳಸಿಕೊಳ್ಳುತ್ತಿರುವುದು ಸರಿಯಲ್ಲ: ಬಿ.ವೈ ವಿಜಯೇಂದ್ರ
ಹೌದು, ಮೆಜೆಸ್ಟಿಕ್ ಅವಿನ್ಯೂ ರೋಡ್, ಗಾಂಧಿನಗರ ಸೇರಿದಂತೆ ಮೊಸ್ಟ್ ಬ್ಯಿಸಿ ಏರಿಯಾದ ಸೆಂಟರ್ ಪಾಯಿಂಟ್ ಆಗಿರೋ ಹಳೆ ಸೆಂಟ್ರಲ್ ಜೈಲ್,ಫ್ರೀಡಂ ಪಾರ್ಕ್ ಪಕ್ಕ ಬಿಬಿಎಂಪಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡವನ್ನ ಕಟ್ಟಿದೆ.. ಸರ್ಕಾರಿ ನೌಕರರಿಗೆ ದೂರದ ಊರುಗಳಿಗೆ ಹೋಗುವವರಿಗೆ ಮೆಜೆಸ್ಟಿಕ್ ಸುತ್ತಮುತ್ತ ಶಾಪಿಂಗ್ ಬರೋರಿಗೆ ಅನುಕೂಲವಾಗಲಿ, ರಸ್ತೆಯಲ್ಲಿ ಎಲ್ಲಂದರಲ್ಲಿ ಪಾರ್ಕ್ ಮಾಡೋದು ತಪ್ಪಲಿ ಅಂತಾ ಈ ಪ್ಲಾನ್ಅನ್ನ ಬಿಬಿಎಂಪಿ ಮಾಡಿತ್ತು.. ಅದ್ರೇ ಈ ಕಟ್ಟಡದಲ್ಲಿ ವಾಹನಗಳೇ ಬಂದು ನಿಲ್ಲಿಸುತ್ತಿಲ್ಲ ಇಂದು ಕೇವಲ ಆರು ವಾಹನಗಳು ಮಾತ್ರ ಪಾರ್ಕಿಂಗ್ ಆಗಿದೆ ಅಂತಾ ಪಾರ್ಕಿಂಗ್ ಲಾಟ್ ಮ್ಯಾನೇಜರ್ ಹೇಳ್ತಿದ್ದಾರೆ
ಇನ್ನೂ ಗಾಂಧಿನಗರದ ಸುತ್ತಮುತ್ತಲಿನ ರಸ್ತೆಯಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ರು ವಾಹನ ಸವಾರರು ಮಾತ್ರ ಯಾರು ಪಾರ್ಕಿಂಗ್ ಗೆ ದುಡ್ಡು ಕಟ್ಟಿ ಅಲ್ಲಿ ನಿಲ್ಲಿಸ್ತಾರೆ ಅಂತಾ ರೋಡ್ ಸೈಡ್ ನಲ್ಲೇ ತಮ್ಮ ವಾಹನಗಳನ್ನ ನಿಲ್ಲಿಸಿ ಹೋಗ್ತಿದ್ದಾರೆ..ಇಷ್ಟು ಖರ್ಚು ಮಾಡಿ ಅತ್ಯುತ್ತಮವಾದ ಸೇಫ್ಟಿ ಜಾಗವನ್ನ ನೀಡಿದ್ರು ವಾಹನ ಸವಾರರು ಮಾತ್ರ ಈ ಕಡೆ ಮುಖ ಮಾಡ್ತಿಲ್ಲ.. ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸ್ರು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಂಡ್ರೇ ರಸ್ತೆಯಲ್ಲಿ ವಾಹನ ನಿಲ್ಲಿಸದೇ ಟ್ರಾಫಿಕ್ ಗೂ ಸಮಸ್ಯೆ ಆಗೋಲ್ಲ ಅಂತಿದ್ದಾರೆ, ಇಲ್ಲಿ ಪಾರ್ಕಿಂಗ್ ಮಾಡಿರೋ ವಾಹನ ಸವಾರರು..
ಅವರಿಗೆ ಕೊಡಿ ಇವರಿಗೆ ಕೊಡಿ ಎನ್ನುವುದಕ್ಕೆ ಸಿಎಂ ಹುದ್ದೆ ಕಡಲೆಪುರಿನಾ?: ಸಚಿವ ಹೆಚ್ಸಿ ಮಹಾದೇವಪ್ಪ
ಒಟ್ನಲ್ಲಿ ಕೋಟಿ ಕೋಟಿ ಖರ್ಚು ಮಾಡಿ ಬಿಬಿಎಂಪಿ ಏನೋ ಕಟ್ಟಡ ಕಟ್ಟಿದೆ..ಕೋಟ್ಯಾಂತರ ರೂಪಾಯಿ ಬಂಡವಾಳವಾಗಿ ಖಾಸಗಿಯವರು ಟೆಂಡರ್ ಪಡೆದಿದ್ದಾರೆ.. 1500 ಕ್ಕೂ ಹೆಚ್ಚು ಬೈಕ್ ಕಾರ್ ನಿಲ್ಲಿಸೋ ಜಾಗ ಮಾತ್ರ ಖಾಲಿ ಖಾಲಿಯಾಗಿಯೇ ಇದೆ.. ಬಿಬಿಎಂಪಿ ಮತ್ತು ಟ್ರಾಪಿಕ್ ಪೊಲೀಸರು ಇ ಭಾಗದಲ್ಲಿ ರೋಡ್ ನಲ್ಲಿ ನಿಲ್ಲಿಸೋ ವಾಹನಗಳ ಮೇಲೆ ನಿಗಾವಹಿಸದೇ ಹೋದ್ರೇ ಅತ್ಯ್ಯಾಧುನಿಕ ಪಾರ್ಕಿಂಗ್ ಕಟ್ಟಡ ದೂಳು ತಿನ್ನೋದ್ರಲ್ಲಿ ಅನುಮಾನವೇ ಇಲ್ಲ..