ಚಿತ್ರದುರ್ಗ : ಗಂಡನ ಮೇಲಿನ ದ್ವೇಶಕ್ಕೆ ತನ್ನ 7 ವರ್ಷದಮಗನಿಗೆ ಬರೆ ಇಟ್ಟು ವಿಕೃತಿ ಮೆರೆದಿದ್ದಾಳೆ. ಚಿತ್ರದುರ್ಗದ ಕವಾಡಿಗರಹಟ್ಟಿ ಆಶ್ರಯ ಬಡಾವಣೆಯಲ್ಲಿ ಇಂಥ ಅಮಾನವೀಯ ಘಟನೆ ನಡೆದಿದ್ದು, ಕೈ, ಕಾಲು ಮೇಲೆ ಬರೆ ಎಳೆದಿದ್ದರಿಂದ ಬಾಲಕನ ನರಳಾಡುವಂತ ದೃಶ್ಯ ಎಂಥವರಿಗೆ ಕರುಳು ಕಿವುಚುತ್ತೆ. ತಮ್ಮ ಮೊಮ್ಮಗನಿಗೆ ನ್ಯಾಯ ಕೊಡಿಸಿ ಅಂತಾ ಬಾಲಕನ ಅಜ್ಜಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ.
ಆಶ್ರಯ ಬಡಾವಣೆಯ ಅನಿಲ್ ಹಾಗೂ ಉಮ್ಮೇಸಲ್ಮಾ ಕಳೆದ 10 ವರ್ಷಗಳ ಹಿಂದೆ ಪ್ರೀತ್ಸಿ ಮದುವೆಯಾಗಿದ್ದರು. ಆದರೆ ಕಳೆದ 2 ವರ್ಷಗಳಿಂದ ತಲಾಖ್ ಪಡೆದಿದ್ದರು. ತಲಾಖ್ ನಂತರ ಇಬ್ಬರೂ ಸಹ ಬೇರೆ ಬೇರೆಯಾಗಿದ್ದಾರೆ. ಈಗ ಉಮ್ಮೇಸಲ್ಮಾ ಅಜ್ಜಿ ಮನೆಗೆ ಹೋಗದಂತೆ, ತಂದೆ ಜೊತೆ ಮಾತನಾಡದಂತೆ ಬಾಲಕನಿಗೆ ಕಿರುಕುಳ ನೀಡುತ್ತಿದ್ದು, ಊಟ ಕೊಡದೇ, ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನೂ ಮಗು ಬೇಕು ತಮಗೆ ಬೇಕು ಅಂತಾ ಪೊಲೀಸ್ ಠಾಣೆಯ ಮುಂದೆಯೇ ಎರಡೂ ಕುಟುಂಬಗಳ ವಾಗ್ವಾದ ನಡೆಸಿದ್ದು, ಬಾಲಕನಿಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಕೌನ್ಸಲಿಂಗ್ ನಡೆಸಲಾಯಿತು, ಕೌನ್ಸಲಿಂಗ್ ಬಳಿಕ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ಅಜ್ಜಿ ಜೊತೆಗೆ ಕಳುಹಿಸಿದ್ದಾರೆ.