ಚಿಕ್ಕಬಳ್ಳಾಪುರ:- ಜಿಲ್ಲೆಯ ಚಿಕ್ಕಬಳ್ಳಾಪುರದಲ್ಲಿ ಐವರು ಹೆಣ್ಣುಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ.
ನಿಮ್ಮಲ್ಲಿ ಈ ಲಕ್ಷಣ ಕಂಡು ಬಂದ್ರೆ ನಿರ್ಲಕ್ಷ್ಯ ಬೇಡ, ಇದು ಸ್ತನ ಕ್ಯಾನ್ಸರ್ ಆಗಿರಬಹುದು!
ತಾಯಿ ಅನಿತಾ ಹಾಗೂ ಆಕೆಯ ಐದು ಜನ ಹೆಣ್ಣು ಮಕ್ಕಳಾದ ಲಾವಣ್ಯ (11), ಧರಣಿ (9), ಕಾವ್ಯ (8), ರಕ್ಷಿತಾ (5), ಶ್ರೀವಲ್ಲಿ (2) ಅವರನ್ನು ಮೊದಲು ಬಾಗೇಪಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಗರ್ಭಿಣಿಯಾಗಿರುವ ತಾಯಿ ಅನಿತಾ ಅವರಿಗೆ ಐ.ಸಿ.ಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗಂಡ ಗೋಪಾಲ ಎಂಬಾತನಿಂದ ಕಿರುಕುಳ ಆರೋಪ ಕೇಳಿಬಂದಿದೆ ಎಂದು ಹೇಳಲಾಗಿದೆ.