ಮನೆಯಲ್ಲಿ ಬಡತನ.. ಅಪ್ಪನಿಗೆ ಕ್ಯಾನ್ಸರ್…ಇದನ್ನೇ ಬಡವಾಳ ಮಾಡಿಕೊಂಡ ಕಾಲೇಜಿನ ಗೆಳೆಯನೊಬ್ಬ ಲಕ್ಷ ಲಕ್ಷ ಪೀಕಿದ್ದಾನೆ. ಮೈಮೇಲೆ ದೇವರು ಬರುತ್ತೆ ಅಂತ ಬಣ್ಣಬಣ್ಣದ ಕಥೆ ಕಟ್ಟಿ ಉಂಡೆ ನಾಮ ಹಾಕಿದ್ದಾನೆ. ಮೈ ಮೇಲೆ ದೇವರು ಬರುವ ಹಾಗೆ ಪೂಜೆ.. ಅಮಾವಸ್ಯೆ ದಿನ ಹೋಮ.. ಬಣ್ಣಬಣ್ಣದ ಕಥೆ… ಅಸಾಯಕಥೆಯೇ ಬಂಡವಾಳ. ಈ ವಿಡಿಯೋದಲ್ಲಿ ದೇವರಿಗೆ ಪೂಜೆ ಮಾಡ್ತಿರೋ ಇತ ಬೇರೆ ಯಾರು ಅಲ್ಲ ಈ ಸ್ಟೋರಿಯ ನಯಾವಂಚಕ ಹೆಸರು ಮಾದೇಶ ನನ್ನ ಮೈ ಮೇಲೆ ದೇವರು ಬರುತ್ತೆ..ಕ್ಯಾನ್ಸರ್ ಗುಣಪಡಿಸೋದಾಗಿ ಕಥೆ ಕಟ್ಟಿ.. ಲಕ್ಷ ಲಕ್ಷ ಪೀಕುತ್ತಿದ್ದಾನೆ ಮಾದೇಶ..ಅಸಲಿಗೆ ಇಲ್ಲಿ ಮಿಸ್ಟರ್ ಬಕ್ರ ಆಗಿದ್ದು ಇವನೇ…ಹೆಸರು ಮಂಜುನಾಥ್.. ಮೈಸೂರು ರಸ್ತೆಯ ಗುಡ್ಡಹಳ್ಳಿಯ ನಿವಾಸಿ…
ಮಂಜು ತಂದೆಗೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಖಾಯಿಲೆ ಇರುತ್ತೆ. ಆಗ ಮಾದೇಶನ ಎಂಟ್ರಿಯಾಗುತ್ತೆ. ನಿಮ್ಮ ತಂದೆ ಕ್ಯಾನ್ಸರ್ ಗೆ ನನ್ನ ಬಳಿ ಪರಿಹಾರ ಇದೆ. ನನ್ನ ಮೈಯಲಿ ಮಲೆ ಮಹಾದೇಶ್ವರ ಸ್ವಾಮಿ ಬರುತ್ತೆ ,ಖಾಯಿಲೆ ನಾನು ಗುಣಪಡಿಸ್ತೀನಿ ಅಂತ ಬಣ್ಣಬಣ್ಣ ಮಾತುಗಳಾಡಿದ್ದ. ಆದರೆ ಪೂಜೆ ಮಾಡಿಸಲು 50 ಸಾವಿರ ಬೇಕು ಅಂತಾ ಕೇಳಿದ್ದ.. ದುಡ್ಡಿಲ್ಲ ಅಂದಾಗ 10%ಗೆ ತಾನೇ ಸಾಲ ಕೊಡಿಸಿದ್ದ. ಮಾದೇಶ್ವರ ಬೆಟ್ಟಕ್ಕೆ ರಾತ್ರಿ ಕರೆದೊಯ್ದು ದೇವರು ಬಂದಂತೆ ನಾಟಕವಾಡಿ ಮಂಜುನಾಥ್ ನನ್ನ ನಂಬಿಸಿ ತನ್ನ ಜಾಲಕ್ಕೆ ಬಿಳಿಸಿಕೊಂಡಿದ್ದ.
Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ..? ಹಾಗಾದ್ರೆ ಹೀಗೆ ಮಾಡಿ ಸಾಕು
ಆದರೆ ಮಂಜುನಾಥ್ ತಂದೆಗೆ ಖಾಯಿಲೆ ಗುಣವಾಗದಿದ್ದಾಗ ಮಾದೇಶನ ಮತ್ತೊಂದು ನಾಟಕ ಶುರುವಾಗುತ್ತೆ. ತಾನು ವಾಸ ಮಾಡುವ ಮನೆಯಿಂದಲೇ ಇದೆಲ್ಲ ಪ್ಲಾಬ್ಲಂ,. ನಿನಗೆ ಫ್ರೀಯಾಗಿ ಪೂಜೆ ಮಾಡಿಕೊಡ್ತೀನಿ, ನೀನು ಒಂದು ಲಕ್ಷ ಸಾಲ ಕೊಡು ನಾನು ಇಐಎಂ ಕಟ್ಟಿಕೊಂಡು ಹೋಗ್ತೀನಿ ಅಂತಾನೇ. ಅವನ ನಂಬಿ ಆಗ ಬ್ಯಾಂಕ್ನಲ್ಲಿ ಲೋನ್ ಮಾಡಿ 1ಲಕ್ಷ ಹಣ ಕೊಟ್ಟಿದ್ದ ಈ ಅಮಾಯಕ ಮಂಜುನಾಥ್. ಹೀಗೆ ಒಂದೊಂದು ಡ್ರಾಮಾ ಮಾಡಿ ಬರೊಬ್ಬರಿ 7 ಲಕ್ಷ ಹಣ ಫೀಕಿದ್ದ.
ಕೊಟ್ಟ ಸಾಲಕ್ಕೆ ಇಎಂಐ ಕಟ್ಟುಲು ಹೊಸ ಹೊಸ ಕತೆ ಹೇಳಿ ಮಾದೇಶ್ ಯಾಮಾರಿಸುತ್ತಿದ್ದ. ಮದುವೆಯಾಗಿದೆ, ಈಗ ನನ್ನ ಮೈಮೇಲೆ ದೇವರು ಬರುತ್ತಿಲ್ಲ ಡ್ರಾಮಾ ಮಾಡಿದ್ದ ಕೊನೆಗೆ ಶ್ರೀರಾಮ ಸೇನೆ ಸಹಾಯ ಪಡೆದು ಮಂಜುನಾಥ್ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು ತನಿಖೆ ಮಾಡ್ತಿದ್ದಾರೆ. ಒಟ್ಟಾರೆ ಮೋಸಹೋಗೋರು ಇರೋವರೆಗು ಮೋಸ ಮಾಡೋರು ಇದ್ದೆ ಇರ್ತಾರೆ. ಬಟ್ ನೀವು ಇಂತಹ ಡೋಂಗಿಗಳ ಬಗ್ಗೆ ಎಚ್ಚರ ವಹಿಸಿ, ಇಲ್ಲ ಮಿಸ್ಟರ್ ಬಕ್ರ ಆಗಿಬಿಡ್ತೀರ ಹುಷಾರ್.