ಬೆಂಗಳೂರು: ಚಿಕನ್ ನೀಡಿಲ್ಲ ಎನ್ನುವ ಕಾರಣಕ್ಕೆ ಪುರಸಭೆ ಸದಸ್ಯನೊಬ್ಬ ಚಿಕ್ಕನ್ ಅಂಗಡಿಯನ್ನು ಧ್ವಂಸಗೊಳಿಸಿಲ್ಲದೆ ನಡು ರಸ್ತೆಯಲ್ಲಿ ಮಚ್ಚು ಹಿಡಿದು ಧಮ್ಕಿ ಹಾಕಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಹೊಸೂರು ರಸ್ತೆಯಲ್ಲಿನ ಭಾಷಾ ಚಿಕ್ಕನ್ ಅಂಗಡಿಯಲ್ಲಿ ನಡೆದಿದೆ.. ಇನ್ನೂ ಪುರಸಭೆ ಸದಸ್ಯನ ಗುಂಡಾಗಿರಿಗೆ ಆನೇಕಲ್ ಜನತೆ ಬಿಚ್ಚಿ ಬಿದ್ದಿದ್ದಾರೆ. ಇನ್ನು ವಾರ್ಡ್ ನಂಬರ್ 22ರ ಪುರಸಭೆ ಸದಸ್ಯರಾದ ರವಿ ಅಂಡ್ ಸಹಚಾರರಿಂದ ಅಂಗಡಿಗೆ ನುಗ್ಗಿ ದಾಂದಲೇ ನಡೆಸಿದ್ದಾರೆ ಎನ್ನಲಾಗಿದೆ.
ಹೌದು ಹೊಸೂರು ಮುಖ್ಯ ರಸ್ತೆಯ ಭಾಷಾ ಅಂಗಡಿಗೆ ಚಿಕನ್ ತರಲು ಪುರಸಭಾ ಸದಸ್ಯ ರವಿ ಅಂಡ್ ಸಹಚರರು ಹೋಗಿದ್ರಂತೆ, ಅಗ ಕ್ಲುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ ಗಲಾಟೆ ವಿಕೋಪಕ್ಕೆ ತಿರುಗಿ ಭಾಷಾ ಚಿಕ್ಕನ್ ಅಂಗಡಿ ನುಗ್ಗಿ ದಾಂದಲೆ ನಡೆಸಿದ್ದಾರೆ.. ಇನ್ನು ಭಾಷಾ ಅಂಗಡಿ ಕಡೆಯವರು ರವಿಗೆ ಸೇರಿದ ಕಾರು ಗಾಜು ಹೊಡೆದು ಧ್ವಂಸ ಮಾಡಿದರೆಂದು ಅರೋಪ ಸಹ ಕೇಳಿ ಬಂದಿದೆ..
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಇನ್ನು ಭಾಷಾ ಅಂಗಡಿಯ ಮಾಲೀಕನಿಗೂ ಮತ್ತು ರವಿಗೂ ಮಾತಿನ ಚಕಮಕಿ ನಡೆದು ಪೋಲಿಸ್ ಮೆಟಿಲೇರಿದ್ದು ಇಬ್ಬರನ್ನ ಕರೆಸಿ ರಾಜಿಸಂಧಾನ ಮಾಡಿ ವಾಪಸ್ ಕಳಿಸಿದ್ದಾರೆ. ಇನ್ನು ಆನೇಕಲ್ ಪಟ್ಟಣದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಡವಿದ್ದಾರೆ ಪದೇ ಪದೇ ಆನೇಕಲ್ ನಲ್ಲಿ ಲಾಂಗು ಮುಚ್ಚಿ ಹಿಡಿದು ಪುಡಿ ರೌಡಿಗಳು ಪುಂಡಾಟ ಮೆರೆಯುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಪೊಲೀಸ್ರಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದರೆ ..ಇನ್ನು ಪ್ರಭಾವಿ ನಾಯಕನಾದ ಕಾರಣಕ್ಕೆ ಆತನನ್ನು ಬಿಟ್ಟು ಕಳಿಸಿದ್ದಾರೆ ಅದೇ ಸಾಮಾನ್ಯ ಪ್ರಜೆಯಾಗಿದ್ದರೆ ಪೊಲೀಸರು ಒದ್ದು ಒಳಗಾಗುತ್ತಿದ್ದರು ಅನ್ನೋ ಮಾತುಗಳು ಸಹ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಇನ್ನು ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..