ಬೆಂಗಳೂರು:- ತನ್ನ ಇಬ್ಬರು ಮಕ್ಕಳನ್ನೇ ತಾಯಿ ಕೊಂದಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ನಿನ್ನೆ ರಾತ್ರಿ ಈ ಘಟನೆ ಜರುಗಿದ್ದು, ಸ್ಥಳಕ್ಕೆ ಜಾಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಶ್ಲೀಲವಾಗಿ ಭಾರತಮಾತೆ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ್ದ ನೀಚ ಅರೆಸ್ಟ್!
ಮಕ್ಕಳನ್ನ ಕೊಲೆ ಮಾಡಿದ ತಾಯಿ ಗಂಗಾದೇವಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಜಾಲಹಳ್ಳಿ ಪೊಲೀಸರಿಂದ ಬಂಧಿಸಲಾಗಿದೆ.
ಲಕ್ಷ್ಮಿ (9) ಗೌತಮ್ (7) ಕೊಲೆಯಾದ ಮಕ್ಕಳು ಎನ್ನಲಾಗಿದೆ. ಮೂಲತಃ ಆಂಧ್ರ ಮೂಲದ ಕುಟುಂಬ ಎಂದು ಹೇಳಲಾಗಿದೆ. ಕೊಲೆ ಆರೋಪಿತೆ ಗಂಗಾದೇವಿ ಪತಿ ಪೊಕ್ಸೊ ಕೇಸ್ ನಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ.
ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಆರೋಪಿತೆ ಗಂಗಾದೇವಿ ಕೆಲಸ ಮಾಡ್ತಿದ್ದರು ಎಂದು ತಿಳಿದು ಬಂದಿದೆ.